ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕ್ಸರ್ ಜಿತೇಂದರ್ ಫ್ರೀ ಕ್ವಾರ್ಟರ್ ಫೈನಲ್ ಗೆ

By Staff
|
Google Oneindia Kannada News

ಬೀಜಿಂಗ್, ಆ. 12 : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಬಾಕ್ಸಿಂಗ್ ಪಟು ಜಿತೇಂದರ್ ಕುಮಾರ ಟರ್ಕಿಯ ಆಟಗಾರ ಉಲಾಸ್ ಫರ್ಕನ್ ಅವರನ್ನು ಸೋಲಿಸುವ ಮೂಲಕ ಫ್ರೀ ಕ್ವಾರ್ಟರ್ ಫೈನಲ್ ತಲುಪಿದರು.

ಏಷಿಯನ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಪಡೆದಿರುವ ಜಿತೇಂದರ್ ಕುಮಾರ್ ಇಂದು ಉತ್ತಮ ಆಟವನ್ನು ಪ್ರದರ್ಶಿಸಿದರು. ನೇರ ಹೊಡೆತಗಳು ಮೂಲಕ ಉಲಾಸ್ ಫರ್ಕನ್ ಮೇಮಿಸ್ ಅವರನ್ನು ನೆಲಕ್ಕುರುಳಿಸಿದರು. ಪ್ರಥಮ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ಜಿತೇಂದರ್ ಕುಮಾರ್ ಎದುರಾಳಿ ಆಟಗಾರನಿಗೆ ಮೇಲೆಳಲು ಅವಕಾಶ ಮಾಡಿಕೊಡಲೇ ಇಲ್ಲ. ಪ್ರತಿ ಹಂತದಲ್ಲಿ ಉತ್ತಮ ಹೊಡೆತಗಳ ಮೂಲಕ 12-3 ಅಂಕ ಗಳಿಸಿ ಫ್ರೀ ಕ್ವಾರ್ಟರ್ ಹಂತಕ್ಕೆ ತಲುಪಿದರು.

ಸೋಮವಾರ ಅಭಿನವ್ ಬಿಂದ್ರಾ ಚಿನ್ನ ಪದಕ ಗೆದ್ದಿರುವುದು ಭಾರತೀಯ ಆಟಗಾರರಲ್ಲಿ ಸ್ಫೂರ್ತಿ ಬಂದಂತಾಗಿದೆ. ಸೈನಾ ನೆಹ್ವಾಲ್ ಉತ್ತಮ ಪ್ರದರ್ಶನ ತೋರುತ್ತಿದ್ದು ಪದಕ ಗಳಿಸುವ ನಿಟ್ಟಿನಲ್ಲಿ ಸಾಗಿದ್ದಾರೆ. ಆದರೆ ಬಹು ನಿರೀಕ್ಷಿತ ರಾಜವರ್ಧನ ಸಿಂಗ್ ರಾಥೋಡ್ ಸೋಲುನುಭವಿಸುವ ಮೂಲಕ ಬಾರತೀಯ ಕ್ರೀಡಾ ಪ್ರೇಮಿಗಳಿಗೆ ನಿರಾಶೆ ಮೂಡಿಸಿದರು. ಮಹಿಳೆಯರ ಬಿಲ್ಲು ವಿದ್ಯೆ (ಆರ್ಚರಿ) ತಂಡಕೂಡ ಕ್ರೀಡಾಕೂಟದಿಂದ ಹೊರಬಿದ್ದಿದೆ.

(ದಟ್ಸ್ ಕನ್ನಡಕ್ರೀಡಾವಾರ್ತೆ)
ಒಲಿಂಪಿಕ್ಸ್ :ರಾಜ್ಯವರ್ಧನ್ ಸಿಂಗ್ ಗೆ ಸೋಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X