ಬೆಂಗಳೂರಿನಲ್ಲಿ ಸ್ವಿಸ್ ರಾಯಭಾರಿ ಕಚೇರಿ ಸ್ಥಾಪನೆ
ಬೆಂಗಳೂರು, ಆ. 12 : ಭಾರತದೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಸ್ವಿಜರ್ ಲ್ಯಾಂಡ್ ದೇಶವು ಬೆಂಗಳೂರಿನಲ್ಲಿ ರಾಯಭಾರಿ ಕಚೇರಿಯನ್ನು ತೆರೆಯಲು ಮುಂದಾಗಿದೆ. ಈಗಾಗಲೇ ಮುಂಬೈ ನಗರದಲ್ಲಿ ರಾಯಭಾರಿ ಕಚೇರಿ ಹೊಂದಿರುವ ಸ್ವಿಜರ್ ಲ್ಯಾಂಡ್ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ಇನ್ನೊಂದು ರಾಯಭಾರಿ ಕಚೇರಿಯನ್ನು ತೆರೆಯುವುದಾಗಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವಿಜರ್ ಲ್ಯಾಂಡ್ ನ ಭಾರತೀಯ ರಾಯಭಾರಿ ಡೂಮಿನಿಕ್ ಡ್ರೆಯರ್, ಭಾರತ ಮತ್ತು ಸ್ವಿಜರ್ ಲ್ಯಾಂಡ್ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸಲು ಸ್ವಿಜರ್ ಲ್ಯಾಂಡ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದ ಹೇಳಿದರು. ಆರ್ಥಿಕವಾಗಿ ಮತ್ತು ಸಾಂಸ್ಕೃತಿಕ ಉಭಯ ದೇಶಗಳು ಶ್ರೀಮಂತವಾಗಿವೆ. ಇದರ ಉಪಯೊಗವನ್ನು ಸರಿಯಾಗಿ ಬಳಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದರು. ಆದ್ದರಿಂದ ಈ ನಿಟ್ಟಿನಲ್ಲಿ ಸ್ವಿಜರ್ ಲ್ಯಾಂಡ್ ಹೆಜ್ಜೆಯಿಟ್ಟಿದೆ ಎಂದು ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
