ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಧಿಕೃತ ಡಿಸ್ಕೋಥೆಕ್‌ಗಳಿಗೆ ಬೀಗ ಜಡಿದ ಪೊಲೀಸರು

By Staff
|
Google Oneindia Kannada News

ಬೆಂಗಳೂರು, ಆ.12: ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ 32 ಡಿಸ್ಕೋಥೆಕ್‌ಗಳ ಮೇಲೆ ಪೊಲೀಸರು ದಾಳಿ ಮಾಡಿ ಅವುಗಳನ್ನು ಮುಚ್ಚಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ,ಅನಧಿಕೃತವಾಗಿ ನಡೆಯುತ್ತಿರುವ 32 ಡಿಸ್ಕೋಥೆಕ್‌ಗಳನ್ನು ಮುಚ್ಚಿಸುವುದಾಗಿ ನ್ಯಾಯಾಲಯಕ್ಕೆ ಈಗಾಗಲೇ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಡಿಸ್ಕೊಥೆಕ್‌ಗಳನ್ನು ಬಂದ್ ಮಾಡಿಸುವ ಜವಾಬ್ದಾರಿಯನ್ನು ಆಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಿಗೆ ವಹಿಸಲಾಗಿತ್ತು.

ನಗರದಲ್ಲಿ ಈಗ ಯಾವುದೇ ಡಿಸ್ಕೋಥೆಕ್‌ಗಳಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. 2005ರ ನೀತಿ ನಿಯಮ ರೂಪಿಸಿ ಕಾನೂನು ರಚಿಸಿರುವ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಕಾನೂನು ಪ್ರಕಾರ ಡಿಸ್ಕೋಥೆಕ್‌ಗಳನ್ನು ನಡೆಸಿದರೆ ಪೊಲೀಸರ ಅಭ್ಯಂತರವೇನೂ ಇಲ್ಲ. ಹಾಗೆಯೇ ಸಮಯ ಮೀರಿ ತೆರೆಯುತ್ತಿದ್ದ ಹೋಟೆಲ್‌ಗಳನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್‌ಗಳು ಮುಚ್ಚಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲ ಹೋಟೆಲ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿ ರಾತ್ರಿವೇಳೆ ಹೋಟೆಲ್‌ಗಳನ್ನು ತೆರೆದಿರಲು ಅನುಮತಿ ಪಡೆಯುತ್ತಿವೆ. ಯಾವ ಮಾನದಂಡಗಳ ಅಡಿ ರಾತ್ರಿ ವೇಳೆ ಹೋಟೆಲ್‌ಗಳನ್ನು ತೆರೆಯಲಾಗುತ್ತಿದೆ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಬಿದರಿ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)
ಪಬ್‌ಗಳ ಮೇಲೆ ಖಾಕಿ ದೌರ್ಜನ್ಯ: ಕಾರ್ನಾಡ್ ಖಂಡನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X