ಅಮರನಾಥ ದೇಗುಲ ವಿವಾದ ಮತ್ತೆ ಸರ್ವಪಕ್ಷ ಸಭೆ
ನವದೆಹಲಿ, ಆ. 12 : ಅಮರನಾಥ ಭೂವಿವಾದ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿದೆ. ಕಳೆದ ಒಂದೂವರೆ ತಿಂಗಳಿನಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆಯನ್ನು ತಣ್ಣಗಾಗಿಸಲು ಮತ್ತೆ ಸರ್ವ ಪಕ್ಷಗಳ ಸಭೆ ನಡೆಸಲಾಗುವುದು ಎಂದು ಕೇಂದ್ರದ ಗೃಹ ಸಚಿವ ಶಿವರಾಜ ಪಾಟೀಲ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಭೆಯ ನೇತೃತ್ವ ವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಲ್ಬಣಿಸಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ತಪ್ಪು ನಿರ್ಧಾರದಿಂದಾಗಿ ಕಣಿವೆ ಪ್ರದೇಶದಲ್ಲಿ ಕೋಮುದಳ್ಳುರಿ ಉಂಟಾಗಿದೆ ಎಂದು ಬಿಜೆಪಿ ಮಾಡಿರುವ ಆರೋಪವನ್ನು ಪಾಟೀಲ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಇದರ ಜತೆಗೆ ಅನೇಕ ಹಿಂದು ಪರ ಸಂಘಟನೆಗಳು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಟೀಕಿಸಿದ್ದವು.
ಕಳೆದ ಒಂದೂವರೆ ತಿಂಗಳಿನಿಂದ ಅಮರನಾಥ ಭೂವಿವಾದ ಪರ ವಿರೋಧಗಳು ಮುಗಿಲು ಮುಟ್ಟಿವೆ. ಹಿಂದು ಸಂಘರ್ಷ ಸಮಿತಿ ಭೂಮಿಯನ್ನು ಸಮಿತಿಗೆ ನೀಡಿ ವಾಪಸ್ಸು ಪಡೆದಿರುವುಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಹಿಂದುಪರ ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿವೆ.
ಅಮರನಾಥ ದೇವಾಲಯಕ್ಕೆ ಸರ್ಕಾರದ ಭೂಮಿಯನ್ನು ನೀಡುವ ಮೂಲಕ ಮತ ಗಳಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ ಎಂದು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಈ ಇಬ್ಬರ ನಡುವೆ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಕಳೆದ ಅನೇಕ ತಿಂಗಳಿನಿಂದ ಜಮ್ಮು ಸೇರಿದಂತೆ ಐದು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಿರಂತರವಾಗಿ ನಡೆಯತೊಡಗಿವೆ. ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇದೇ ವಿವಾದದಲ್ಲಿ ಗುಲಾಮ್ ನಬಿ ಅಜಾದ್ ಸರ್ಕಾರ ಪತನವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಮೇಲೆ ದೇವೇಗೌಡರ ಟೀಕಾಸ್ತ್ರಗಳ ಸುರಿಮಳೆ
ಅಮರನಾಥ ಭೂವಿವಾದ ಕೊನೆಗಾಣಿಸಲು ಸಮಿತಿ
ಸಾಂಬಾ ಗೋಲಿಬಾರ್ ನ್ಯಾಯಾಂಗ ತನಿಖೆಗೆ ಆದೇಶ
ಅಮರನಾಥ್ ಭೂವಿವಾದ : ಸರ್ವಪಕ್ಷಗಳ ಸಭೆಗೆ ಕರೆ


Click it and Unblock the Notifications
