ರಂಗಶಂಕರದಲ್ಲಿ ಕೈಲಾಸಂ ಅವರ 'ಅಮ್ಮಾವ್ರಗಂಡ'
ಬೆಂಗಳೂರು, ಆ. 10: ನಗರದ ರಂಗ ಶಂಕರದಲ್ಲಿ ಪ್ರಹಸನ ಪಿತಾಮಹ ಟಿಪಿಕೈಲಾಸಂ ಅವರ ನಾಟಕ 'ಅಮ್ಮಾವ್ರಗಂಡ' ಪ್ರದರ್ಶನಗೊಳ್ಳುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ವಟೀ ಕುಟೀರ ನಾಟಕ ತಂಡ ಪ್ರಸ್ತುತಪಡಿಸುವ ಈ ನಗೆ ನಾಟಕ ಈ ಹಿಂದೆರಂಗಶಂಕರ ತುಂಬಿದ ಗೃಹ ಪ್ರದರ್ಶನ ಕಂಡಿತ್ತು.
ಹಾಸ್ಯ ಮಿಶ್ರಿತ ಸಾಮಾಜಿಕ ಕಳಕಳಿಯ ಈ ನಾಟಕವನ್ನು ಇಂದಿನ ಕಾಲಕ್ಕೆ ಸರಿಹೊಂದುವಂತೆ ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರದರ್ಶನ ಮಾಡುತ್ತಿದ್ದೇವೆ. ಉಳಿದಂತೆ ಕೈಲಾಸಂರವರ ಪಂಚಿಂಗ್ ಡೈಲಾಗ್ ಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ ಎಂದು ನಾಟಕದ ನಿರ್ದೇಶಕ ಕಿರಣ್ ವಟಿ ಹೇಳಿದರು.
ನಾಟಕ: ಅಮ್ಮಾವ್ರಗಂಡ
ಸ್ಥಳ : ರಂಗಶಂಕರ, ಜೆಪಿನಗರ 2ನೇಹಂತ, ಬೆಂಗಳೂರು
ದಿನಾಂಕ: 12 ಆಗಸ್ಟ್
ಸಮಯ: 7:30
ಪಾತ್ರ ಪರಿಚಯ:
ಸುಬ್ಬು: ವಾದಿರಾಜ್ ಭಟ್
ನರಸಿಂಹು: ಹೆಚ್ .ಸಿ. ಶ್ರೀನಿವಾಸ್
ಸರೋಜ: ದೀಪಾ ರವಿಶಂಕರ್
ಕಮಲೂ: ವಿನುತ.ಜಿ
ಕೈಲಾಸಂ ಪಾತ್ರ: ಶಂಕರ ನಾರಾಯಣ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕಿರಣ್ ವಟಿ :98806 95659
(ದಟ್ಸ್ ಕನ್ನಡ ಸಭೆ ಸಮಾರಂಭ)


Click it and Unblock the Notifications
