ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ 5 ಲಕ್ಷ ಮೌಲ್ಯದ ನಕಲಿ ಸಿಡಿಗಳು ವಶ

By Staff
|
Google Oneindia Kannada News

ಬೆಂಗಳೂರು, ಆ. 10 : ನಗರದ ಎಸ್ ಪಿ ರಸ್ತೆಯಲ್ಲಿರುವ ಹತ್ತು ಅಂಗಡಿಗಳು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ವಿವಿಧ ಭಾಷೆಯ 5 ಲಕ್ಷ ಮೌಲ್ಯದ ನಕಲಿ ಸಿಡಿಗಳನ್ನು ವಶಪಡಿಸಿಕೊಳ್ಳುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಇಂದು ಯಶಸ್ವಿಯಾಗಿದ್ದಾರೆ.

ಕಳೆದ ಅನೇಕ ದಿನಗಳಿಂದ ಎಸ್ ಪಿ ರಸ್ತೆಯಲ್ಲಿ ನಕಲಿ ಸಿಡಿ ಜಾಲ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಗ್ರಾಹಕರು ಮೋಸ ಹೋಗುತ್ತಿರುವುದು ಮಾಮೂಲು ಸಂಗತಿಯಾಗಿತ್ತು. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಕಲಿ ಸಿಡಿ ಜಾಲ ಬೇಧಿಸಲು ಮಹತ್ವದ ಕಾರ್ಯಚರಣಿ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು, ಇಂದು ಹತ್ತು ಅಂಗಡಿಗಳು ಸೇರಿ ಗೋದಾಮುಗಳು ಮೇಲೆ ದಾಳಿಸಿದ್ದಾರೆ. ವಿವಿಧ ಭಾಷೆಯ ಒಟ್ಟು 5 ಲಕ್ಷ ಮೌಲ್ಯದ ನಕಲಿ ಸಿಡಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮೈಸೂರು, ತುಮಕೂರು ರಸ್ತೆಗಳಲ್ಲಿ ಕೂಡ ನಕಲಿ ಸಿಡಿಜಾಲ ಹರಡಿರುವ ಸುದ್ದಿ ಬಂದಿದ್ದು, ಈ ಬಗ್ಗೆ ಹುಡುಕಾಟ ಜಾರಿಯಲ್ಲಿದೆ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣಾಧಿಕಾರಿ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಮೈಸೂರಿನಲ್ಲಿ 20 ಸಾವಿರ ನಕಲಿ ಸಿಡಿಗಳ ವಶ
ಗೂಂಡಾ ಕಾಯ್ದೆ ಜಾರಿಗೆ ಜಯಮಾಲಾ ಆಗ್ರಹ
ನಕಲಿ ಸಿಡಿಜಾಲದಲ್ಲಿ ಗಣೇಶ್ ಚಿತ್ರಗಳಿಗೆ ಡಿಮ್ಯಾಂಡ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X