• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಕ್ರೀಡಾಕೂಟ : ಭಾರತಕ್ಕೆ ಮಿಶ್ರಫಲ

By Staff
|

ಬೀಜಿಂಗ್, ಆ.10: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ನಿರಾಶೆ ಮೂಡಿಸಿದ್ದಾರೆ. ಶನಿವಾರ ಒಟ್ಟು ಹದಿನೆಂಟು ಪ್ರಮುಖ ಸ್ಪರ್ಧೆಗಳು ನಡೆದವು. ಅದರಲ್ಲಿ ಏಳು ಸ್ಪರ್ಧೆಯಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಕೆಲವು ಆಟಗಾರರ ಮುನ್ನಡೆ ಹೊರತುಪಡಿಸಿ ಎರಡನೇ ದಿನ ಆರಂಭವಾದರೂ ಭಾರತದ ಸಾಧನೆ ಶೂನ್ಯ.

ಆದರೆ ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ನಲ್ಲಿ ರಷ್ಯಾ ಆಟಗಾರ್ತಿಯನ್ನು ಸೋಲಿಸಿ ಒಂದು ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದು, ಇಂದು ಭಾರತೀಯರಿಗೆ ಸಂತಸದ ಸಂಗತಿ. ಪದಕ ಗೆಲ್ಲಲು ಹೋರಾಡಬೇಕಿರುವ ಹಾದಿ ಸುಗಮವಾಗೇನು ಇಲ್ಲ. ವಿಜೇಂದರ್ ಕುಮಾರ್(ಬಾಕ್ಸಿಂಗ್), ಬಹಿರಂಗಲಾಲ್ ಠಾಕೂರ್(ರೋಯಿಂಗ್) ತಮ್ಮ ಯತ್ನಗಳಲ್ಲಿ ಕಂಡುಕೊಂಡ ಯಶಸ್ಸು ಭಾರತದ ಆಸೆಯನ್ನು ತಕ್ಕಮಟ್ಟಿಗೆ ಜೀವಂತವಾಗಿರಿಸಿದೆ.

ಅರ್ಚರಿ ಸ್ಪರ್ಧೆಯಲ್ಲಿ ಪದಕದ ಆಸೆ ಮರೀಚಿಕೆ ಯಾಯಿತು. ಮಂಗಲ್ ಸಿಂಗ್ ಚಂಪಿ ಪ್ರಥಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಸ್ಪರ್ಧೆಯಲ್ಲಿ ಮಹಿಳೆಯರಲ್ಲಿ ಡೋಲಾ ಬ್ಯಾನರ್ಜಿ ಮತ್ತು ಲೈಶ್ ಲಾಯ್ ಬೊಂಬಾಯ್ಲಾ ದೇವಿ ಮತ್ತು ಪ್ರಣೀತಾ ವರ್ಧಿನೇನಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ವಾರ್ಟರ್ ಪೈನಲ್ ಪ್ರವೇಶಿಸಿದ್ದರು. ಆದರೆ ಇಂದು ಅತಿಥೇಯ ಚೀನಾ ವಿರುದ್ಧ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಈ ಮಧ್ಯೆ ಭಾರತದ ವೇಟ್ ಲಿಫ್ಟರ್ ಮೋನಿಕಾದೇವಿ ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪದಿಂದ ಮುಕ್ತರಾಗಿದ್ದಾರೆ. ಆದರೆ ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಕಾರಣ ಒಲಿಂಪಿಕ್ ಗೆ ಪ್ರವೇಶ ದಾಖಲಿಸುವ ಪ್ರಕ್ರಿಯೆ ಕೊನೆಯಗೊಂಡಿರುವುದರಿಂದ ಅವಕಾಶ ಇಲ್ಲ ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ನಾನು ಅಮಾಯಕಳು, ಉದ್ದೀಪನ ಸೇವಿಸಿಲ್ಲ:ಮೋನಿಕಾ

ಒಲಿಂಪಿಕ್ಸ್ : ಉದ್ಘಾಟನೆಗೆ ಕ್ಷಣಗಣನೆ ಆರಂಭ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more