ಗುರೂಜಿ.ಕಾಂ ನಲ್ಲಿ ಸಂಗೀತ ರಸಮಯ ಶೋಧಕ
ಬೆಂಗಳೂರು, ಆ. 10 : ಹಿಂದೆ ಆಧ್ಯಾತ್ಮಿಕ ಗುರು ಎಂಬ ಖ್ಯಾತಿ ಹೊಂದಿದ್ದ ಭಾರತ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಂತ್ರಜ್ಞಾನ ಗುರು ಎನಿಸಿಕೊಳ್ಳತೊಡಗಿದೆ. ಈ ಹಿನ್ನೆಲೆಯಲ್ಲಿ ಭಾರತ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನ ಹಾಗೂ ಕಲೆಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಗುರೂಜಿ.ಕಾಂ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಗುರೂಜಿ.ಕಾಂಶೋಧಕ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಈ ಸರ್ಚ್ ಇಂಜಿನ್ ನಲ್ಲಿ ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು , ಮಲಯಾಳಂ, ಮರಾಠಿ, ಗುಜರಾತಿ ಭಾಷೆಗಳಲ್ಲಿ ಇಷ್ಟದ ಸಂಗೀತವನ್ನು ಆಲಿಸಬಹುದು. ನಗರಗಳ ಮಾಹಿತಿ, ಸಿನಿಮಾ ಪ್ರದರ್ಶನ ಸಮಯ ಹಾಗೂ ಸಂಗೀತವನ್ನು ಇಲ್ಲಿ ಹುಡುಕಬಹುದು. 1932ರ ನಂತರ ಎಲ್ಲಾ ಬಗೆಯ ಸಂಗೀತ ಈ ಸರ್ಚ್ ಇಂಜಿನ್ ನಲ್ಲಿ ಶೇಖರಿಸಲಾಗಿದೆ ಎನ್ನುತ್ತಾರೆ ಗುರೂಜಿ .ಕಾಂ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಡೊಡ್.
ಹೆಚ್ಚಿನ ಮಾಹಿತಿಗೆ ನಂ. 3ಜೆ, 2ನೇ ಮಹಡಿ, ಎನ್ಎ ಚೇಂಬರ್ಸ್, 3ನೇ ಅಡ್ಡರಸ್ತೆ, 7ನೇ ಸಿ.ಮುಖ್ಯರಸ್ತೆ, 3ನೇ ಹಂತ, ಕೋರಮಂಗಲ, ಬೆಂಗಳೂರು-34 ವಿಳಾಸ ಇಲ್ಲವೆ, ದೂರವಾಣಿ ಸಂಖ್ಯೆ 40713800 ಇಲ್ಲಿ ಸಂಪರ್ಕಿಸಬಹುದು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
