ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲ್ ಆಸ್ಪತ್ರೆಯಿಂದ ರಕ್ತ ಸುರಕ್ಷತಾ ವಾರ

By Staff
|
Google Oneindia Kannada News

ಬೆಂಗಳೂರು, ಆ.9: ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯು ಈ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 11ರಿಂದ 16 ರವರೆಗೆ'ರಕ್ತ ಸುರಕ್ಷತಾ ವಾರ'ವನ್ನು ಆಚರಿಸುತ್ತದೆ.

ರಕ್ತವು ಶಸ್ತ್ರಚಿಕಿತ್ಸೆ, ಅಪಘಾತಕ್ಕೋಳಗಾದವರಿಗೆ ಹಾಗೂ ಮುಂತಾದ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಬೇಕಾಗುತ್ತದೆ. ರಕ್ತ ಸಿಕ್ಕರೂ ರೋಗಿಗಳಿಗೆ ಹೊಂದಿಕೆಯಾಗುವಂತಹರಕ್ತ ಸಿಗುವುದು ಅಪರೂಪ. ಸಂದರ್ಭಕ್ಕೆ ಸರಿಯಾಗಿ ರಕ್ತ ಸಿಗದೆ ಪ್ರಾಣವನ್ನು ಕಳೆದು ಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಅವಶ್ಯಕತೆಗೆ ತಕ್ಕಂತೆ ರಕ್ತವು ಸರಿಯಾದ ಪ್ರಮಾಣದಲ್ಲಿ ಸಿಗುವಂತಾಗಬೇಕಾದರೆ ರಕ್ತದ ಸಂರಕ್ಷಣೆ ಆಗಬೇಕಿದೆ. ಈ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಣಿಪಾಲ ಆಸ್ಪತ್ರೆಯು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ಸುರಕ್ಷಾ ರಕ್ತದಾನಿಯು ಯಾವುದೇ ಲೈಂಗಿಕ ತೊಂದರೆಗಳಿಗೆ ಒಳಗಾಗಿರಬಾರದು. ಏಡ್ಸ್ / ಹೆಚ್ ಐ ವಿ, ಮಲೇರಿಯಾ, ಹೆಪಟೈಟಿಸ್ ಮುಂತಾದ ಸೋಂಕಿಗೆ ತುತ್ತಾಗಿರಬಾರದು. ಹೆಚ್ಚಿನವರ ನಂಬಿಕೆ ಪ್ರಕಾರ 'ತಮ್ಮ ಸ್ನೇಹಿತರ, ಸಂಬಂಧಿಕರ ರಕ್ತವನ್ನು ಪಡೆಯುವುದು ಸುರಕ್ಷಿತವಾದುದು'ಆದರೆ, ವೈಜ್ಞಾನಿಕವಾಗಿ ಅದು ತಪ್ಪು. ಆಪ್ತರು ತಮ್ಮ ರಕ್ತ ಸುರಕ್ಷಿತವಾಗಿಲ್ಲ ಎಂದು ತಿಳಿದಿದ್ದರೂ ತಮ್ಮವರು ತೊಂದರೆಯಲ್ಲಿ ಸಿಲುಕಿದ್ದಾರೆ ಎಂಬ ಕಾರಣದಿಂದ ರಕ್ತ ದಾನ ಮಾಡುತ್ತಾರೆ. ಇದು ಒಂದಲ್ಲ ಒಂದು ತೊಂದರೆಗೆ ಎಡೆಮಾಡಿ ಕೊಡುತ್ತದೆ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ಸಿ.ಶಿವರಾಮ್.

ಇನ್ನೊಂದು ನಂಬಲೇ ಬೇಕಾದ ವಿಚಾರವೆಂದರೆ ರಕ್ತದ ಬ್ಯಾಂಕ್‌ಗಳಲ್ಲಿ ಪರೀಕ್ಷಿಸಿ ಇಟ್ಟಂತಹ ಎಲ್ಲಾ ರಕ್ತವು ನೂರಕ್ಕೆ ನೂರರಷ್ಟುಸುರಕ್ಷಿತವಾಗಿರುವುದಿಲ್ಲ. ದೇಶದ ಹೆಚ್ಚಿನ ರಕ್ತಬ್ಯಾಂಕ್‌ಗಳು ಹೆಚ್ ಐ ವಿ ಸೋಂಕಿಗೆ ಕಾರಣವಾಗುವ ವೈರಸ್ ಅನ್ನು ಪರೀಕ್ಷಿಸುವುದಿಲ್ಲ. ರಕ್ತ ಪರೀಕ್ಷೆ ಮಾಡುವ ವೇಳೆಯಲ್ಲಿ ವ್ಯಕ್ತಿಯ ದೇಹದ ಆಂಟಿ ಬಾಡೀಸ್ ಹೆಚ್ ಐ ವಿ ಸಂಬಂಧಿ ವೈರಸ್ ಇದ್ದರೂ ಕಾಣದಂತೆ ಮಾಡುತ್ತದೆ. ಇದರಿಂದ ವ್ಯಕ್ತಿ ಹೆಚ್ ಐ ವಿ ಪಾಸಿಟಿವ್ ಎಂದು ಗುರುತಿಸುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಾಗೂ ಹೆಚ್ ಐ ವಿವೈರಸ್ ಕಂಡು ಹಿಡಿಯಲು ಮಣಿಪಾಲ್ ಆಸ್ಪತ್ರೆಯು ''ಮಿನಿ- ಪೂಲ್ ನ್ಯೂಸಿಲಿಕ್ ಆಸಿಡ್ ಸ್ಕ್ರೀನಿಂಗ್ ''ಎಂಬ ವಿನೂತನ ವಿಧಾನವನ್ನು ಉಪಯೋಗಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ
ಶೃತಿ ಮಾದಪ್ಪ: 90086 99399 / 23337344

(ದಟ್ಸ್‌ಕನ್ನಡ ಸಭೆ-ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X