ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಬಂಧಕ್ಕೆ ಅಮೆರಿಕ ಕಾನೂನು ತಜ್ಞರ ಕೊಕ್ಕೆ

By Staff
|
Google Oneindia Kannada News

ವಾಷಿಂಗ್ ಟನ್, ಆ. 8 : ಎಲ್ಲ ವಿಘ್ನಗಳು ಕಳೆದು ಇನ್ನೇನು ಭಾರತ ಅಮೆರಿಕ ಪರಮಾಣು ಒಪ್ಪಂದದ ದಾರಿ ಸುಗಮವಾಯಿತು ಎನ್ನುವ ಹೊತ್ತಿನಲ್ಲೇ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿ ಕ್ಯಾತೆ ತೆಗೆದಿದೆ. ಒಪ್ಪಂದಕ್ಕೆ ಅವಸರ ಮಾಡುವುದಕ್ಕಿಂತ ವಿವೇಚನೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ. ಭಾರತವು ಅಮೆರಿಕದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳಲಿದೆಯೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಬುಷ್ ಸರ್ಕಾರಕ್ಕೆ ಸಲಹೆ ನೀಡಿದೆ.

ಒಪ್ಪಂದದ ನಂತರ ಭಾರತ ತನ್ನ ಶತ್ರು ರಾಷ್ಟ್ರಗಳ ಮೇಲೆ ಹಗೆ ಸಾಧಿಸಲು ಅಣ್ವಸ್ತ್ರ ತಯಾರಿಕೆಯಂಥ ಅಪಾಯಕಾರಿ ಕೆಲಸಕ್ಕೆ ಕೈಹಾಕುವುದಿಲ್ಲ ಎನ್ನುವ ಗ್ಯಾರಂಟಿ ಯಾರಿಗಿದೆ. ಆದ್ದರಿಂದ ಈ ಬಗ್ಗೆ ಭಾರತದೊಂದಿಗೆ ಸ್ಪಷ್ಟವಾಗಿ ಮಾತುಕತೆ ನಡೆಸಬೇಕು, ನಂತರ ಪರಮಾಣು ಒಪ್ಪಂದಕ್ಕೆ ಚಾಲನೆ ನೀಡಬೇಕು ಎಂದು ತಿಳಿಸಿದೆ.

ಆ. 21 ರಂದು ಅಮೆರಿಕ ಕಾಂಗ್ರೆಸ್ ಮುಂದೆ ಒಪ್ಪಂದದ ವಿಷಯ ಪ್ರಸ್ತಾಪವಾಗಲಿರುವ ಹಿನ್ನೆಲೆಯಲ್ಲಿ ಅದನ್ನು 2009ರ ಜನವರಿ ತಿಂಗಳವರೆಗೂ ಯಾವ ಪ್ರಕ್ರಿಯೆಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿಯು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಕಂಡೋಲಿಜಾ ರೈಸ್ ಅವರಿಗೆ ಪತ್ರ ಬರೆದಿದೆ.

ಭಾರತ-ಅಮೆರಿಕ ಪರಮಾಣು ಒಪ್ಪಂದದಲ್ಲಿ ಅನೇಕ ದೋಷಗಳಿವೆ. ಕೂಲಂಕಷವಾಗಿ ಪರಿಶೀಲನೆ ನಂತರ ಒಪ್ಪಂದಕ್ಕೆ ಮುಂದಾಗುವ ಅಗತ್ಯವಿದೆ ಎಂದು ಕ್ಯಾಲಿಪೋರ್ನಿಯಾ ಡೆಮಾಕ್ರಟಿಕ್ ಪಕ್ಷದ ಮುಖಂಡ ಬರ್ಮನ್ ಆಗ್ರಹಿಸಿದ್ದಾರೆ.

ಸಮಿತಿಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬುಷ್ ಆಡಳಿತದ ವಕ್ತಾರರು, ಭಾರತ 1974 ರಲ್ಲಿ ಪರಮಾಣು ಪರೀಕ್ಷೆ ನಡೆಸಿದಾಗ ಎನ್ ಪಿ ಟಿ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಆದ್ದರಿಂದ ಆಗಿನ ವಿಷಯವನ್ನು ಇಂದಿನ ಒಪ್ಪಂದಕ್ಕೆ ತಾಳೆ ಹಾಕುವುದು ಸರಿಯಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಸುಸೂತ್ರವಾಯಿತು ಎನ್ನುವಾಗಲೇ ಮತ್ತೊಂದು ವಿಘ್ನ ಎದುರಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಅಣು ಬಂಧ ಅಂದರೆ ಏನು? ವಕ್ತಾರರಿಗೆ ರಾಹುಲ್ ಪಾಠ
ಅಣು ಒಪ್ಪಂದ ಜಪಾನ್ ಮನವೊಲಿಕೆಯತ್ತ ಪ್ರಣಬ್
ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X