ಮಾಯಾವತಿಯಿಂದ ಸ್ವಪ್ರತಿಮೆ ಸ್ಥಾಪನೆ ಮುಂದುವರಿಕೆ

ಲಕ್ನೋ, ಆ. 8 : ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ತಮ್ಮ ಪ್ರತಿಮೆ ಸ್ಥಾಪಿಸುವ ಅಭಿಯಾನವನ್ನು ತೀವ್ರ ವಿರೋಧಗಳ ನಡುವೆಯೂ ಮುಂದುವರಿಸಿದ್ದಾರೆ. ಲಕ್ನೋದ ವಿವಿಧ ಕಡೆಗಳಲ್ಲಿ ಮೂರು ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ಮೂರ್ತಿ ಸ್ಥಾಪನೆ ವ್ಯಕ್ತಿಗಳು ಜೀವಂತವಿರುವಾಗ ಮಾಡುವ ಕೆಲಸವಲ್ಲ. ಆದರೆ ಕೆಲ ಚಲನಚಿತ್ರ ನಟರು, ರಾಜಕೀಯ ನಾಯಕರು ಇದನ್ನು ಮರೆತು ಎಗ್ಗಿಲ್ಲದಂತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿಕೊಳ್ಳುತ್ತಿದ್ದಾರೆ. ನಾಯಕ ಹಾಗೂ ನಾಯಕಿಯರ ಪ್ರತಿಮೆಯನ್ನು ಅಭಿಮಾನಿಗಳು ಪ್ರತಿಷ್ಠಾಪಿಸುವುದು ವಾಡಿಕೆ. ಆದರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಪ್ರಧಾನಮಂತ್ರಿಯಾಗುವ ಕನಸು ಹೊತ್ತಿರುವ ಮಾಯಾವತಿ ಸ್ವಯಂಪ್ರೇರಣೆಯಿಂದ ತಮ್ಮ ಮೂರ್ತಿಯನ್ನು ತಾವೇ ಸಾರ್ವಜನಿಕರ ಸ್ಥಳದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಬುದ್ಧನ ಸ್ತೂಪದ ರೀತಿಯಲ್ಲಿ ಬಿಎಸ್ ಪಿ ಕಚೇರಿಯ ಸ್ಥಳದಲ್ಲಿ 18 ಅಡಿ ಉದ್ದದ ಮಾಯಾವತಿ ಕಲ್ಲಿನ ಮೂರ್ತಿಯನ್ನು ಮೊದಲು ಸ್ಥಾಪಿಸಲಾಯಿತು. ನಂತರ ಬಹುಜನ ನಾಯಕ ಪಾರ್ಕ್ ನಲ್ಲಿ ಇನ್ನೊಂದು ಮೂರ್ತಿ ಸ್ಥಾಪನೆಯಾಯಿತು. ಕಾನ್ಷಿರಾಮ್ ಮೆಮೋರಿಯಲ್ ಬಳಿ ಸಹ ತಮ್ಮ ಪ್ರತಿಮೆಯನ್ನು ತಾವೇ ಉದ್ಘಾಟಿಸಿಕೊಂಡರು. ಮಾಯಾವತಿ ಅವರ ಈ ಕ್ರಮವನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ. ಆದರೆ ಮಾಯಾವತಿ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮೂರ್ತಿಗಳನ್ನು ಪ್ರತಿಷ್ಠಾಪನೆಯಲ್ಲಿ ತೊಡಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+