ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವವಧುವಿನಂತೆ ಸಿಂಗಾರವಾಗಿದೆ ಲಾಲ್‌ಬಾಗ್

By Staff
|
Google Oneindia Kannada News

ಬೆಂಗಳೂರು, ಆ.8: ಫಲಪುಷ್ಪ ಪ್ರದರ್ಶನಕ್ಕೆ ಇಡೀ ಲಾಲ್‍ಬಾಗ್ ಸಸ್ಯತೋಟ ನವವಧುವಿನಂತೆ ಸಿಂಗಾರವಾಗಿದ್ದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 9 ರಿಂದ 17ರವರೆಗೆ ನಾಲ್ಕನೆ ರಾಷ್ಟ್ರೀಯ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಗಾಜಿನ ಮನೆಯಲ್ಲಿ ಹೂಕುಂಡಗಳಲ್ಲಿ ಬೆಳೆದ 300ಕ್ಕೂ ಹೆಚ್ಚು ವೈವಿಧ್ಯಮಯ ಹೂಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಸಂಗೀತ ವಾದ್ಯಗಳಾದ ವೀಣೆ,ತಬಲ,ಪಿಟೀಲು ಮಾದರಿಯ ಆಕರ್ಷಕ ಹೂ ಗಿಡಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ. ಲಾಲ್‌ಬಾಗ್ ಕೆರೆಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗುತ್ತಿದ್ದು ನೋಡುಗರಿಗೆ ಮುದನೀಡಲಿದೆ.

ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ತೋಟಗಾರಿಕೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ನವದೆಹಲಿ, ಜಮ್ಮು ಮತ್ತು ಕಾಶ್ಮೀರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಪ್ರತಿಷ್ಠಿತ ಪುಪ್ಪೋದ್ಯಮಿಗಳು ಆಗಮಿಸುತ್ತಿರುವುದಾಗಿ ತಿಳಿಸಿದರು. ಬೆಂಗಳೂರಿನ ಪ್ರಸಿದ್ಧ ಖಾಸಗಿ ಸಂಸ್ಥೆಗಳಾದ ಬಿಎಚ್‌ಇಎಲ್, ಬಿಇಎಂಎಲ್, ಎಚ್‌ಎ‍ಎಲ್, ಬಿಡಿಎ ತರಕಾರಿ ಪುಷ್ಪಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ ಎಂದು ಬೆಳ್ಳುಬ್ಬಿ ವಿವರ ನೀಡಿದರು.

ಲಾಲ್‌ಬಾಗ್ ಪುಷ್ಫ ಪ್ರದರ್ಶನಕ್ಕೆ ಈ ಬಾರಿ ವಿಶೇಷ ಭದ್ರತೆಯನ್ನು ಒದಗಿಸಲಾಗಿದ್ದು ಫಲಪುಷ್ಪ ವೀಕ್ಷಿಸಲು ಬರುವ ಸಾರ್ವಜನಿಕರು ಕೈಚೀಲ ಹಾಗೂ ತಿನ್ನುವ ಪದಾರ್ಥಗಳನ್ನು ತರುವಂತಿಲ್ಲ. ವಿಡಿಯೋ ಕ್ಯಾಮೆರಾಗೆ ರು.50 ಹಾಗೂ ಕ್ಯಾಮೆರಾಗೆ ರು.20 ಶುಲ್ಕ ನಿಗದಿಪಡಿಸಲಾಗಿದೆ. ಆ.14ರಂದು ಬೆಳಗ್ಗೆ 8ರಿಂದ 12ಗಂಟೆಯ ವರೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X