ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಯ ವಿದ್ಯುತ್ ಯೋಜನೆಗೆ ಪರಿಸರವಾದಿಗಳ ವಿರೋಧ

By Staff
|
Google Oneindia Kannada News

ಮಂಗಳೂರು, ಆ. 8: ಗುಂಡ್ಯ ಜಲವಿದ್ಯುತ್ ಯೋಜನೆಯ ಮೊದಲನೇ ಹಂತದ ಕಾಮಗಾರಿಗೆ ಬೇಕಾದ ಮಾಹಿತಿ ಒದಗಿಸುವಲ್ಲಿ ಪರಿಸರ ನಿರ್ವಹಣೆ ಹಾಗೂ ಜಲಾನಯನ ಪ್ರದೇಶ ಅಧ್ಯಯನ ಕೇಂದ್ರ ವಿಫಲವಾಗಿದೆ. ಈವರೆಗೂ ಗುಂಡ್ಯ ಯೋಜನೆಯ ಬಗ್ಗೆ ಬೆಂಗಳೂರಿನ ಅಧ್ಯಯನ ಕೇಂದ್ರ ನೀಡಿರುವ ವರದಿ ಹಲವಾರು ದೋಷಗಳಿಂದ ಕೂಡಿದೆ. ಆದ್ದರಿಂದ ಈ ಕೂಡಲೇ ವರದಿಯನ್ನು ತಿರಸ್ಕರಿಸಿ, ಸರಿಯಾದ ಪರಿಶೀಲನೆ ನಡೆಸಬೇಕು ಎಂದು ಕುದುರೆಮುಖ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನ ಆಗ್ರಹಿಸಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಎಂ. ಮಹೇಶ್ವರ್ ರಾವ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.

ಅಧ್ಯಯನ ತಂಡದವರು ಸಮಗ್ರ ಮಾಹಿತಿ ಕಲೆಹಾಕಿಲ್ಲ. ಈ ವರದಿ ಸರ್ಕಾರ ಹಾಗೂ ಸಾರ್ವಜನಿಕರ ದಿಕ್ಕು ತಪ್ಪಿಸುತ್ತದೆ. ಉದ್ದೇಶಿತ ಯೋಜನೆಯ ಸ್ಥಳವು ಪುಷ್ಪಗಿರಿ ಅರಣ್ಯ ಪ್ರದೇಶದಿಂದ ಸುಮಾರು 30 ಕಿ.ಮೀ ದೂರವಿದೆ ಎಂದು ವರದಿಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ಭಾರತೀಯ ಸರ್ವೇಕ್ಷಣ ಇಲಾಖೆಯ ದಾಖಲೆಯ ಪ್ರಕಾರ ಗುಂಡ್ಯಕ್ಕೂ ಪುಷ್ಪಗಿರಿಗೂ ಇರುವ ದೂರ 9.5 ಕಿ.ಮೀ ಆಗಿದೆ. ಪರಿಸರ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಒಂದು ಎಂದು ಗುಂಡ್ಯ ಸುತ್ತಮುತ್ತಲಿನ ಪ್ರದೇಶವನ್ನು ಗುರುತಿಸಲಾಗಿದೆ ಎಂದು ಪ್ರತಿಷ್ಠಾನದ ನರೇಶ್ ಜೈನ್ ಹೇಳುತ್ತಾರೆ.

ಜೀವ ವೈವಿಧ್ಯತೆಯ ಆಗರವಾಗಿರುವ ಈ ಅರಣ್ಯವನ್ನು ಬಲಿಕೊಡಲು ಸಂಚು ನಡೆದಿದೆ. ವಿನಾಶದ ಅಂಚಿನಲ್ಲಿರುವ ಹಲವಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಈ ಪ್ರದೇಶದಲ್ಲಿ ವಿದ್ಯುತ್ ಯೋಜನೆ ಕಾರ್ಯಗತವಾದರೆ, ಅಪಾರ ಪ್ರಮಾಣದ ಕಾಡು, ವನ್ಯಜೀವಿಗಳು ಹೇಳಹೆಸರಿಲ್ಲದಂತೆ ನಾಶವಾಗುವುದು ಖಂಡಿತ. ಆದ್ದರಿಂದ ತಪ್ಪು ಮಾಹಿತಿಗಳಿಂದ ಕೂಡಿದ ವರದಿಯನ್ನು ತಿರಸ್ಕರಿಸಬೇಕು. ಪರಿಸರ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ನರೇಶ್ ಹೇಳಿದರು.

(ದಟ್ಸ್ ಕನ್ನಡವಾರ್ತೆ)

ಚಾಮಲಾಪುರ ಸ್ಥಾವರ ಸ್ಪಾಪನೆ ಖಚಿತ : ಯಡಿಯೂರಪ್ಪ
ತದಡಿ ಯೋಜನೆಗೆ ತಡೆ ಇಲ್ಲ : ಈಶ್ವರಪ್ಪ ಸ್ಪಷ್ಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X