ಮರೀಚಿಕೆಯಾಗುತ್ತಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
ನವದೆಹಲಿ, ಆ.8: ಕೇಂದ್ರ ಸರ್ಕಾರ ನೇಮಿಸಿರುವ ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿ ಆರ್.ಗಾಂಧಿ ಎಂಬ ವಕೀಲರೊಬ್ಬರು ಚೆನ್ನೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.ಶುಕ್ರವಾರ(ಆ.8) ದೆಹಲಿಯಲ್ಲಿ ಸಭೆ ಸೇರಲಿರುವ ಭಾಷಾ ತಜ್ಞರ ಸಮಿತಿ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಶಿಫಾರಸು ಮಾಡಲಿರುವುದು ಬಹುತೇಕ ಖಚಿತವಾಗಿರುವಾಗಲೇ ಹೊಸ ಸಮಸ್ಯೆ ಧುತ್ತನೆ ಎದುರಾಗಿದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇನ್ನೇನು ಒಲಿದೇ ಬಿಟ್ಟಿತು ಎನ್ನುವ ಹೊತ್ತಿಗೆ ತಮಿಳುನಾಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಕೇಂದ್ರ ಸರ್ಕಾರ ನೇಮಿಸಿರುವ ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿ ಆರ್.ಗಾಂಧಿ ಎಂಬ ವಕೀಲರೊಬ್ಬರು ಚೆನ್ನೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆಗೆ ಸ್ವೀಕರಿಸಿರುವ ಚೆನ್ನೈ ಹೈಕೋರ್ಟ್ ಮೂರು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ. ಇಂದು ದೆಹಲಿಯಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಶಿಫಾರಸು ಮಾಡುವ ಸಾಧ್ಯತೆ ಇತ್ತು. ಈಗ ಈ ಸಭೆ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಭಾಷಾ ಸಮಿತಿಯ ನೀತಿ, ಬದಲಾದ ನಿಯಗಳನ್ನು ಪ್ರಶ್ನಿಸಿ ವರ್ಲ್ಡ್ ಫೆಡರೇಶನ್ ಆಫ್ ತಮಿಳ್ಸ್ ಎಂಬ ಸಂಘಟನೆಯ ಗಾಂಧಿ ಹೇಳುವ ಪ್ರಕಾರ, ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. 3 ವಾರದಲ್ಲಿ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ತಮಿಳು ಹೈಕೋರ್ಟ್ ತೀರ್ಮಾನ ಕನ್ನಡಕ್ಕೆ ಸಿಗುವ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು. ಆದರೆ ರಿಟ್ ಅರ್ಜಿ ಸಲ್ಲಿಸುವಾಗ ಆ ವ್ಯಕ್ತಿಗೆ ಅದರಿಂದಾಗುವ ಲಾಭ ಅಥವಾ ನಷ್ಟ ಹಾಗೂ ಈ ವಿಷಯದಲ್ಲಿ ಆತನ ಅಧ್ಯಯನವನ್ನ್ನು ಪರಿಗಣಿಸಲಾಗುತ್ತದೆ. ಸಮಿತಿ ಈಗಾಗಲೇ ತಮಿಳು ಭಾಷೆಗೆ ನೀಡಿರುವ ಶಾಸ್ತ್ರೀಯ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ನಿರ್ಧಾರದಂತೆ ಸಮಿತಿ ನೇಮಕವಾಗಿದೆ. ಹೀಗಿದ್ದು ತಮಿಳನೊಬ್ಬ್ಬ ಅದನ್ನು ಯಾವ ಆಧಾರದಲ್ಲಿ ವಿರೋಧಿಸಲು ಸಾಧ್ಯ ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಸಂಗತಿಗಳು ಕನ್ನಡದ ಪರವಾಗಿರುವ ಕಾರಣ ಕೊಂಚ ಸಮಾಧಾನ ಪಡುವಂತಾಗಿದೆ.
(ದಟ್ಸ್‌ಕನ್ನಡ ವಾರ್ತೆ)
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ತಮಿಳರಿಂದ ವಿರೋಧ
ಕನ್ನಡ ಭಾಷೆಗೆ ಶಾಸ್ತ್ರೀಯ ಗೌರವ : ಮುನ್ನಾನೋಟಗಳು
ಕೇಂದ್ರ ಸರ್ಕಾರಕ್ಕೆ ಜನಾರ್ದನ ಪೂಜಾರಿ ಮಂಗಳಾರತಿ!
ಶಾಸ್ತ್ರೀಯ ಭಾಷೆ ಗೌರವ : ಎಂಪಿಗಳಿಗೆ ಪಾಪು ಛೀಮಾರಿ


Click it and Unblock the Notifications
