• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ

By Staff
|

ಬೀಜಿಂಗ್, ಆ. 8 : ಐತಿಹಾಸಿಕ 26ನೇ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿದ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ 8 ಗಂಟೆಗೆ(ಚೀನಾ ಕಾಲಮಾನ ಪ್ರಕಾರ) ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಶ್ರೀಮಂತ ನಾಗರಿಕತೆಯನ್ನು ಹೊಂದಿರುವ ಹಾಗೂ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ಜೀನಾದ ರಾಜಧಾನಿ ಬೀಜಿಂಗ್ ನಲ್ಲಿ ಏರ್ಪಡಿಸಲಾಗಿರುವ ವರ್ಣರಂಜಿತ ಅದ್ಧೂರಿಯ ಉದ್ಘಾಟನೆ ಸಮಾರಂಭದಲ್ಲಿ ದೇಶ ವಿದೇಶದ ಅನೇಕ ದಿಗ್ಗಜರು ಭಾಗವಹಿಸಿದ್ದರು. ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಬ್ರಿಟನ್ ಪ್ರಧಾನಿ ಬ್ರೌನ್, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟೀನ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ಗಣ್ಯರು ವರ್ಣರಂಜಿತ ಕಾರ್ಯಕ್ರಮವನ್ನು ವೀಕ್ಷಿಸಿದರು.

2008 ನೇ ಇಸ್ವಿ, 8ನೇ ತಿಂಗಳು, ರಾತ್ರಿ 8 ಗಂಟೆ, 8 ನಿಮಿಷಕ್ಕೆ ಚೀನಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ಒಂದೇ ಜಗತ್ತು, ಒಂದೇ ಕನಸು' ಅಧಿಕೃತ ಧ್ಯೇಯವಾಕ್ಯವನ್ನು ಸಾರಲಾಯಿತು. ಚೀನಾದ ಖ್ಯಾತ ಗಾಯಕ ಲ್ಯೂ ಹಾನ್ ಮತ್ತು ಬ್ರಿಟನ್ ನ ಖ್ಯಾತ ಗಾಯಕಿ ಸರಹಾ ಬ್ರೈಟ್ ಮ್ಯಾನ್ ಒಲಿಂಪಿಕ್ಸ್ ಧ್ಯೇಯ ಗೀತೆಗಳನ್ನು ಹಾಡಿದರು. ಬೀಜಿಂಗ್ ಒಲಂಪಿಕ್ಸ್ ಅಧಿಕೃತ ಚಾಲನೆಗೂ ಮುನ್ನ ಸಂಜೆ 5.45 ರಿಂದ 7 ಗಂಟೆವರೆಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. 7.56 ರಿಂದ ಕ್ಷಣಗಣನೆ ಆರಂಭವಾಗಿ, ಸರಿಯಾಗಿ 8 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಂಡಿತು, ರಾತ್ರಿ 11.30ರ ವರೆಗೆ ಸಾಂಸ್ಕೃತಿಕ ನಡೆಯಲಿದೆ.

ಸ್ವಾಗತ ಸಮಾರಂಭ, ಒಲಿಂಪಿಕ್ ರಿಂಗ್ ಪ್ರದರ್ಶನ, ರಾಷ್ಟ್ರೀಯ ಧ್ವಜಾರೋಹಣ, ರಾಷ್ಟ್ರಗೀತೆ ಹಾಡುವುದು ಈ ಕಾರ್ಯಕ್ರಮಗಳು ಕೇವಲ 14 ನಿಮಿಷದಲ್ಲಿ ಮುಗಿದವು. ನಂತರ ಒಂದು ಗಂಟೆ ಕಾರ್ಯಕ್ರಮದಲ್ಲಿ ಆಧುನಿಕ ಹಾಗೂ ಪ್ರಾಚೀನ ಚೀನಾದ ಸಾಂಸ್ಕ್ರತಿಕ ಲೋಕ ಅನಾವರಣಗೊಂಡಿತು. ಚೀನಾ ನಾಗರಿಕತೆಯನ್ನು ಸಾರುವ ತೈಲ ವರ್ಣ ಚಿತ್ರಗಳ ಪ್ರದರ್ಶನ ಹಾಗೂ ಆಧುನಿಕ ಸಾಂಸ್ಕ್ರತಿಕ ಲೋಕ ಪ್ರೇಕ್ಷಕರನ್ನು ರಂಜಿಸಿದವು. ಸುಮಾರು 15 ಸಾವಿರ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೀಜಿಂಗ್ ನಲ್ಲಿ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮವನ್ನು ಡಿಡಿ ಸ್ಪೋರ್ಟ್ಸ್ ನಲ್ಲಿ ಹಾಗೂ ಡಿಡಿ ನ್ಯಾಷನಲ್ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಯಿತು.

(ದಟ್ಸ್ ಕನ್ನಡ ವಾರ್ತೆ)

ಬೀಜಿಂಗ್‌ಗೆ ಪ್ರವಾಸ ಹೊರಟ ಸೋನಿಯಾಗಾಂಧಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more