ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.22ಕ್ಕೆ ಏರ್ ಟೆಲ್, ವೊಡಾಫೋನ್ ಐಫೋನ್ ಬಿಡುಗಡೆ

By Staff
|
Google Oneindia Kannada News

ಬೆಂಗಳೂರು, ಆ. 8: ಆಪಲ್ ಕಂಪೆನಿಯ ಐಫೋನ್ ಮೊಬೈಲ್ ಗಳನ್ನು ಭಾರತದಲ್ಲಿ ಏರ್ ಟೆಲ್ ಹಾಗೂ ವೊಡಾಫೋನ್ ಎಸ್ಸಾರ್ ಕಂಪೆನಿಗಳು ಪರಿಚಯಿಸುತ್ತಿವೆ. ಆಗಸ್ಟ್ 22 ರಂದು ಸ್ಥಳೀಯ ಮಾರಾಟ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

3 ಜಿ ತಂತ್ರಜ್ಞಾನ ಹಾಗೂ ಜಿಪಿಎಸ್ ವ್ಯವಸ್ಥೆ ಹೊಂದಿರುವ ಐಫೋನ್, ಈಗಿರುವ ಆಧುನಿಕ ಮೊಬೈಲ್ ಗಳಿಗಿಂತ ದುಪ್ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ. ಗ್ರಾಹಕರಿಗೆ ಸುಲಭವಾಗುವ ರೀತಿಯಲ್ಲಿ ಮೊಬೈಲ್ ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಏರ್ ಟೆಲ್ ಭಾರತದಲ್ಲಿ ಸುಮಾರು 6.9 ಕೋಟಿ ಹಾಗೂ ವೊಡಾಫೋನ್ ಸುಮಾರು 4.9 ಕೋಟಿ ಗ್ರಾಹಕರನ್ನು ಹೊಂದಿದೆ. ಐಫೋನ್ ಮೊಬೈಲ್ ಬೆಲೆಯನ್ನು ಇನ್ನು ನಿಗದಿಪಡಿಸಿಲ್ಲ. ಅ. 22 ರ ತಿಳಿಯಲಿದೆ ಎಂದು ಎರಡೂ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಆಪಲ್ ಕಂಪೆನಿ ಪ್ರತಿಸ್ಪರ್ಧಿಗಳಾದ ನೊಕಿಯಾ, ಮೋಟೊರೊಲಾ ಮತ್ತು ಸ್ಯಾಮ್ ಸಾಂಗ್ ಕಂಪೆನಿಗಳು ಐಫೋನ್ ಗೆ ವಿರುದ್ಧವಾಗಿ ಹೊಸ ಉತ್ಪ್ಪನ್ನವನ್ನು ಹೊರಬಿಡಲು ಸಂಶೋಧನೆಯಲ್ಲಿ ತೊಡಗಿವೆ ಎಂಬ ಸುದ್ದಿ ಬಂದಿದೆ.

(ದಟ್ಸ್ ಕನ್ನಡವಾರ್ತೆ)

ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ-3ಜಿ ಐಫೋನ್
ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಜಾಬ್ಸ್ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X