ನಾನು ಅಮಾಯಕಳು, ಉದ್ದೀಪನ ಸೇವಿಸಿಲ್ಲ:ಮೋನಿಕಾ
ನವದೆಹಲಿ, ಆ. 6 : ನಾನು ಅಮಾಯಕಳು, ಭಾರತೀಯ ಕ್ರೀಡಾ ಮಂಡಳಿಯ ಸದಸ್ಯರ ನನ್ನನ್ನು ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಕಳಂಕಿತ ವೇಟ್ ಲಿಪ್ಟರ್ ಮೋನಿಕಾದೇವಿ ಆರೋಪಿಸಿದ್ದಾರೆ.
ಬೆಂಗಳೂರಿನ ಮಾಯ್ ನಲ್ಲಿ ನಡೆದ ಉದ್ದೀಪನ ಔಷಧಿ ಸೇವನೆ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮೇಲೆ ಸಿಕ್ಕು ಬಿದ್ದು, ಕ್ರೀಡಾಕೂಟದಿಂದ ಅನರ್ಹಗೊಂಡ ನಂತರ ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ರೀಡಾ ಜೀವನವನ್ನು ಮುಗಿಸಲು ಕೆಲವರು ಸಂಚು ರೂಪಿಸಿದ್ದಾರೆ. ನನ್ನ ಮೇಲೆ ಅಷ್ಟೊಂದು ಕೋಪವಿದ್ದರೆ ಸಾರ್ವಜನಿಕರವಾಗಿ ಗುಂಡಿಟ್ಟು ಕೊಂದುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಶೈಲಜಾ ಅವರನ್ನು ಬೀಜಿಂಗ್ ಗೆ ಕಳಿಸುವ ಉದ್ದೇಶ ಹೊಂದಿರುವ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ. ನಾಯ್ಡು ಅವರು, ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಈ ಆರೋಪ ಹೊರಿಸಿದ್ದಾರೆ. ಇದರಲ್ಲಿ ಷಡ್ಯಂತ್ರ ಅಡಗಿದೆ. ನನಗೆ ಆಗಿರುವ ಅನ್ಯಾಯದಿಂದ ತೀವ್ರ ಘಾಸಿಗೊಂಡಿರುವೆ. ನ್ಯಾಯಕ್ಕಾಗಿ ನ್ಯಾಯಲಯದ ಮೊರೆ ಹೋಗುವೆ. ಇದರ ವಿರುದ್ಧ ಕಾನೂನು ಪ್ರಕಾರ ಹೋರಾಡುತ್ತೇನೆ ಎಂದ ಮೋನಿಕಾ ದೇವಿ ಅಸಹಾಯಕರಾಗಿ ನುಡಿದರು. ಈ ಸಂದರ್ಭದಲ್ಲಿ ದುಖಃ ತಡೆದುಕೊಳ್ಳಲಾರದೆ ಅವರು ಕಣ್ಣೀರು ಹಾಕಿದರು. ನನ್ನನ್ನು ಕೆಲವರ ಹಿತಾಸಕ್ತಿಯ ಸಲುವಾಗಿ ಬಲಿ ತಗೆದುಕೊಳ್ಳಲಾಗಿದೆ ಎನ್ನುವ ಮಾತು ಅವರ ಬಾಯಿಂದ ಪದೇಪದೆ ಹೊರಬಂದಿತು.
ಮೋನಿಕಾ ಸೇವಿಸಿದ್ದು ಅನಾಬೋಲಿಕ್ ಸಾಲ್ಟ್, ಅಂತರಾಷ್ಟ್ರೀಯ ಒಲಂಪಿಕ್ ಸಂಸ್ಥೆ ಈ ಉದ್ದೀಪನವನ್ನು ನಿಷೇಧಿಸಿದೆ. ಈ ಅನಾಬೋಲಿಕ್ ಸ್ಟಿರಾಯ್ಡ್ ನ್ನು ಮೂದಲು ಅಭಿವೃದ್ಧಿಪಡಿಸಿದ್ದು 1930ರಲ್ಲಿ. ಈ ಔಷಧಿಯನ್ನು ಮೂಳೆಗಳ ಬೆಳವಣಿಗೆಗೆ, ಅಂಗಸೌಷ್ಟವ ಹೆಚ್ಚಿಸಿಕೊಳ್ಳಲು ಬಳಸಲಾಗುತ್ತದೆ. ಅನಾಬೋಲಿಕ್ ಸ್ಟಿರಾಯ್ಡ್ ಸತತ ಬಳಕೆಯಿಂದ ದೇಹದ ಕೊಲೆಸ್ಟರಾಲ್ ಮಟ್ಟ ಏರುಪೇರಾಗುತ್ತದೆ. ಮೊಡವೆ, ಅಧಿಕ ರಕ್ತದೊತ್ತಡ, ಪಿತ್ತಜನಕಾಂಗ ಹಾನಿ, ಹೃದಯದ ಎಡಹೃತ್ಕುಕ್ಷಿ ಮೇಲೆ ಪರಿಣಾಮ ಬೀರುತ್ತದೆ. ಒಲಂಪಿಕ್ಸ್ ಗೇಮ್ ನಲ್ಲಿ 69 ಕೆಜಿ ಮಹಿಳೆಯರ ವಿಭಾಗದಲ್ಲಿ ಮೋನಿಕಾದೇವಿ ಭಾಗವಹಿಸಬೇಕಿತ್ತು.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)


Click it and Unblock the Notifications
