ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಬಂಧ ಅಂದರೆ ಏನು? ವಕ್ತಾರರಿಗೆ ರಾಹುಲ್ ಪಾಠ

By Staff
|
Google Oneindia Kannada News

ನವದೆಹಲಿ, ಆ. 6 : ಮುಂದಿನ ವರ್ಷ ಮಾರ್ಚ್ ನಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆ, ಹಾಗೂ ವಿವಿಧ ರಾಜ್ಯಗಳ ವಿಧಾನ ಚುನಾವಣೆಗೆ ವೇಳೆಯಲ್ಲಿ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಸಾಧಕ-ಬಾಧಕಗಳನ್ನು ಸಮರ್ಥವಾಗಿ ಜನತೆಗೆ ಮನದಟ್ಟು ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಯು ವನೇತಾರ ರಾಹುಲ್ ಗಾಂಧಿ ಪಕ್ಷದ ವಕ್ತಾರರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಂಸದರಿಗೆ ಒಪ್ಪಂದದ ಕುರಿತು ಸಮಗ್ರವಾಗಿ ಪಾಠ ಮಾಡುವ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಂಡಿದ್ದಾರೆ.

ಎಡಪಕ್ಷಗಳು, ಬಿಜೆಪಿ ಹಾಗೂ ಬಿಎಸ್ಪಿ ಯಂಥ ಪಕ್ಷಗಳು ಅಣು ಒಪ್ಪಂದವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಒಬ್ಬರು ಅಣು ಒಪ್ಪಂದವನ್ನು ಮುಸ್ಲಿಂ ವಿರೋಧಿ ಎಂದರೆ, ಇನ್ನೊಬ್ಬರ ದೇಶಕ್ಕೆ ಮಾರಕ ಎಂದು ಜನರ ಮನಸ್ಸು ಕೆಡಿಸಿದ್ದಾರೆ. ಆದ್ದರಿಂದ ಪಕ್ಷದ ಎಲ್ಲ ಪದಾಧಿಕಾರಿಗಳು ಅಣು ಒಪ್ಪಂದ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಬೇಕು. ಆ ಮೂಲಕ ಚುನಾವಣೆ ವೇಳೆಯಲ್ಲಿ ಜನರಿಗೆ ಇದರ ಸರಿಯಾದ ತಿಳುವಳಿಕೆ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ರಾಹುಲ್ ಗಾಂಧಿ ಈ ಕಾರ್ಯಕ್ರಮಕ್ಕೆ ಕೈಹಾಕಿದ್ದಾರೆ.

ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಹಾಗೂ ಇದೇ ವರ್ಷದಲ್ಲಿ ಅಂತ್ಯದಲ್ಲಿ ರಾಜಸ್ಥಾನ,, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಾಧನೆ ಅದರಲ್ಲಿ ಮುಖ್ಯವಾಗಿ ಅಮೆರಿಕದೊಂದಿನ ಅಣು ಒಪ್ಪಂದ ಜನರ ಮನಸ್ಸಿನಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡಲಾಗಿದೆ. ಅದರಿಂದಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ 38 ರ ಹರೆಯದ ರಾಹುಲ್, ಬಡ ಕಲಾವತಿಯ ಕರುಣಾಜನಕ ಕಥೆಯನ್ನು ಹೇಳಿ, ಅಣು ಒಪ್ಪಂದವನ್ನು ಸಮರ್ಥಿಸಿಕೊಂಡ ರೀತಿ ಎಲ್ಲರ ಮನ ತಟ್ಟುವಂತೆ ಮಾಡಿತ್ತು. ಅಣು ಒಪ್ಪಂದದಿಂದ ದೇಶದ ಬಡತನ ಹೋಗಲಾಡಿಸಬಹುದು. ವಿದ್ಯುತ್ ಉತ್ಪಾದಿಸಬಹುದು. ಶ್ರೀಮಂತಿಕೆಯನ್ನು ಮೆರೆಯುವ ಎಲ್ಲ ಅವಕಾಶಗಳಿವೆ. ದೇಶದ ಹಿತಾಸಕ್ತಿಗೆ ಅಣು ಒಪ್ಪಂದ ಅವಶ್ಯಕ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X