ಜೆಸಿನಗರದ ಮನೆಯೊಂದರಲ್ಲಿ 9.8 ಕೋಟಿ ವಶ

ಬೆಂಗಳೂರು, ಆ. 5 : ಕೆಂದ್ರೀಯ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜೆಸಿ ನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಅನಾಮತ್ತು 9.8 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

ಅಗತ್ಯ ಸುಳಿವಿನ ಮೇರೆಗೆ ವ್ಯವಸ್ಥಿತವಾಗಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಜೆ.ಸಿ.ನಗರ ಪ್ರದೇಶದ ಸಯ್ಯದ್ ಜಹೀರ್ ಎನ್ನುವವರ ಮನೆಯಲ್ಲಿ ಇಡಲಾಗಿದ್ದ, 9.8 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳುವಲ್ಲಿ ಕೆಂದ್ರೀಯ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆರೋಪಿ ಸಯ್ಯದ್ ಜಹೀರ್ ನನ್ನು ಪೊಲೀಸರು ಬಂಧಿಸಿದ್ದು, ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇಷ್ಟೊಂದು ದೊಡ್ಡ ಮೊತ್ತ ದೊರೆಕಿರುವ ಬೆನ್ನಲ್ಲೇ ಅನೇಕ ಸಂಶಯಗಳು ಹುಟ್ಟಿಕೊಂಡಿವೆ. ಅಪಾರ ಪ್ರಮಾಣದ ಹಣ ಸಯ್ಯದ್ ಜಹೀರ್ ಅವರಿಗೆ ಎಲ್ಲಿಂದ, ಇವರ ಮನೆಯಲ್ಲಿ ಯಾವ ಕಾರಣಕ್ಕೆ ಇಡಲಾಗಿತ್ತು. ಇವರ ಉದ್ಯೋಗವೇನು ಸೇರಿದಂತೆ ಅನೇಕ ಸಂಶಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ನಡೆಸುತ್ತಿದ್ದಾರೆ. ಸಯ್ಯದ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿರುವ ಭೂಮಿಯನ್ನು ಮಾರಾಟ ಮಾಡಿರುವುದರಿಂದ ಈ ಹಣ ಬಂದಿದೆ. ಬ್ಯಾಂಕ್ ನಲ್ಲಿ ಇಡಬೇಕು ಎನ್ನುವಷ್ಟರಲ್ಲಿ ದಾಳಿ ನಡೆದಿದೆ ಎಂದು ತಿಳಿಸಿದ್ದಾನೆ. ಹವಾಲ ಹಗರಣದ ಹಣ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಬೆಂಗಳೂರಿನಲ್ಲಿ ಹಾಡುಹಗಲೇ ರು.36 ಲಕ್ಷ ದರೋಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+