ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದ್ ಉಗ್ರರ 7 ರೇಖಾಚಿತ್ರಗಳು ಸಿದ್ಧ

By Staff
|
Google Oneindia Kannada News

ಅಹಮದಾಬಾದ್, ಆ. 6 : ಜೈಪುರ ಹಾಗೂ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಏಳು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ನಮ್ಮ ಬಳಿ ಏಳು ಜನ ಉಗ್ರರ ರೇಖಾಚಿತ್ರಗಳಿವೆ. ಕಳೆದ ವರ್ಷ ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇವರ ಕೈವಾಡವಿರುವುದು ಸ್ಪಷ್ಟವಾಗಿದೆ. ಆದರೆ ಅಹಮದಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಸುಳಿವು ದೊರೆತಿಲ್ಲ. ರೇಖಾಚಿತ್ರದಲ್ಲಿರುವ ಏಳು ಉಗ್ರರು ಅಹಮದಾಬಾದ್ ಸ್ಫೋಟದಲ್ಲೂ ಭಾಗಿಯಾಗಿರುವ ಸಾಧ್ಯತೆಗಳಿವೆ. ತಜ್ಞರ ತಂಡ ಉಗ್ರರ ಪತ್ತೆ ಕಾರ್ಯದಲ್ಲಿ ನಿರತವಾಗಿದೆ. ಅಹಮದಾಬಾದ್‌ನಲ್ಲಿ ಕೂಬಿಂಗ್ ಕಾರ್ಯಾಚರಣೆ ಎಂದು ಅಹಮದಾಬಾದ್ ಜಂಟಿ ಪೊಲೀಸ್ ಆಯುಕ್ತ ಆಶೀಶ್ ಭಾಟಿಯಾ ಸ್ಪಷ್ಟಪಡಿಸಿದ್ದಾರೆ.

ಉಗ್ರರ ಪತ್ತೆಗಾಗಿ ಪೊಲೀಸರು ಇದುವರೆಗೂ 3,000 ವಾಹನಗಳನ್ನು, 110 ಹೋಟೆಲ್‌ ಹಾಗೂ ಅತಿಥಿ ಗೃಹಗಳನ್ನು ತಪಾಸಣೆ ಮಾಡಿದ್ದಾರೆ, 30ಕ್ಕೂ ಅಧಿಕ ಸಾರ್ವಜನಿಕ ಉದ್ಯಾನಗಳನ್ನು , ತೋಟದ ಮನೆಗಳನ್ನು ಹಾಗೂ 42ಕ್ಕು ಅಧಿಕ ಧಾರ್ಮಿಕ ಸ್ಥಳಗಳನ್ನು ಜಾಲಾಡಿದ್ದಾರೆ. 155ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಒಳಪಡಿಸಿರುವುದಾಗಿ ಭಾಟಿಯಾ ತಿಳಿಸಿದರು.

ಸೂರತ್ ಮತ್ತು ಅಹಮದಾಬಾದ್ ನಗರಗಳಲ್ಲಿ ಬಾಂಬ್ ಇಡಲು ಸಹಕರಿಸಿದ ಮೂರು ಮಂದಿಯ ರೇಖಾಚಿತ್ರವನ್ನು ತಯಾರಿಸಲಾಗಿದೆ. ಅಪರಾಧಿ ನಿಗ್ರಹ ದಳದ ಪೊಲೀಸರು ಈ ಕುರಿತು ಮಹತ್ವ ಮಾಹಿತಿ ಕಲೆ ಹಾಕಿದ್ದಾರೆ. ನಗರ ಪೊಲೀಸ್ ಮತ್ತು ಅಪರಾಧಿ ನಿಗ್ರಹ ದಳ ಜಂಟಿ ಕಾರ್ಯಚರಣೆ ಆರಂಭಿಸಿದ್ದು, ಶೀಘ್ರದಲ್ಲಿ ಇನ್ನಷ್ಟು ಮಹತ್ವದ ಸಂಗತಿಗಳು ಹೊರಬೀಳಲಿವೆ ಎಂದು ತಿಳಿಸಿದರು. ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತರು ಸ್ಫೋಟದಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ ಎಂದು ತಿಳಿದು ಬಂದಿರುವುದಾಗಿ ತಿಳಿಸಿದರು.

ಜು.26ರಂದು ಅಹಮದಾಬಾದ್‌ನ ಸುಮಾರು 17 ಕಡೆಗಳಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಉಗ್ರರು ಅಟ್ಟಹಾಸ ಮೆರೆದಿದ್ದರು. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಮೃತಪಟ್ಟು ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ವಾಣಿಜ್ಯ ನಗರಿ ಸೂರತ್ ನಲ್ಲಿಯೂ ಸುಮಾರು 22 ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X