ಉದ್ಯಮಗಳ ವಿಕೇಂದ್ರೀಕರಣಕ್ಕೆ ಯಡಿಯೂರಪ್ಪ ಒತ್ತು

Karnataka Chief Minister B.S. Yeddyurappaಬೆಂಗಳೂರು, ಆ. 2 : ಬೆಂಗಳೂರಿನ ಸುತ್ತಮುತ್ತಲೇ ಬೀಡುಬಿಟ್ಟಿರುವ ಉದ್ಯಮಗಳನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮುಖ ಹೆಜ್ಜೆ ಇರಿಸಿದ್ದಾರೆ. ರಾಜ್ಯದ ಇತರ ನಗರಗಳಲ್ಲಿಯೂ ಉದ್ಯಮ ಸ್ಥಾಪಿಸಲು ಮುಂದಾದರೆ ಭೂಮಿ, ವಿದ್ಯುತ್, ಸಂಪರ್ಕ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲು ಸಿದ್ಧ ಎಂದು ಆಶ್ವಾಸನೆ ನೀಡಿದ್ದಾರೆ.

ಶುಕ್ರವಾರ ರಾತ್ರಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯಡಿಯೂರಪ್ಪನವರು, ಕರ್ನಾಟಕದ ಇತರ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವತ್ತ ಉದ್ಯಮ ಚಿತ್ತ ಹರಿಸಬೇಕು ಎಂದು ಕೇಳಿಕೊಂಡರು.

ಬೆಂಗಳೂರಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿಯೇ 1800 ಕೋಟಿ ರು. ಬಂಡವಾಳವನ್ನು ಈ ವರ್ಷ ತೆಗೆದಿರಿಸಲಾಗಿದೆ. ಆದರೆ, ಐಟಿ ರಾಜಧಾನಿಯ ಮೂಲಸೌಕರ್ಯವನ್ನು ನಿರ್ವಹಿಸುವುದೇ ತಲೆನೋವಾಗಿದೆ. ಆದ್ದರಿಂದ, ಉದ್ಯಮಗಳು ಇತರ ನಗರಗಳಿಗೆ ಸ್ಥಳಾಂತರಗೊಳ್ಳುವುದು ಅತಿ ಮುಖ್ಯ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಉದ್ಯಮಗಳಿಗೆ ಯಾವುದೇ ರೀತಿಯ ಸಹಾಯವನ್ನು ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ಇನ್ನೂ ಹೆಚ್ಚಿನ ತೆರಿಗೆ ರಿಯಾಯತಿಯನ್ನು ಕೇಳಬಾರದು. ನಗರದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವ ಅಗತ್ಯವಿದೆ. ಈ ಅಭಿವೃದ್ಧಿಯ ಲಾಭವನ್ನು ನೀವೇ ಪಡೆಯುವಿರಿ ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದರು. ಐಟಿ ಕ್ಷೇತ್ರ ಮಾತ್ರವಲ್ಲ ಕೃಷಿ ಕ್ಷೇತ್ರಕ್ಕೂ ತಕ್ಕ ಪಾಲು ಸಿಗಲಿದೆ ಎಂದು ನುಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+