6 ವಿಕೆಟ್ ಕಬಳಿಸಿ ಲಂಕನ್ನರನ್ನು ಗೋಳಾಡಿಸಿದ ಭಜ್ಜಿ

Harbhajan Singhಗಾಲೆ, ಆ. 2 : ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಶ್ರೀಲಂಕಾ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 292 ರನ್‌ಗಳಿಗೆ ಆಲೌಟಾಗಿದೆ. ಭಾರತ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಡಬಲ್ ಸೆಂಚುರಿ ಸಹಾಯದಿಂದ 329 ರನ್ ಗಳಿಸಿತ್ತು. 37 ರನ್‌ಗಳ ಮುನ್ನಡೆ ಪಡೆದಿರುವ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 56 ರನ್ ಗಳಿಸಿದೆ.

ಗಾಲೆ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಲಂಕನ್ನರ ವಿರುದ್ಥ ಅದ್ಭುತ ಲಯ ಪಡೆದುಕೊಂಡಿರುವ ಹರಭಜನ್ ಸಿಂಗ್ 40.3 ಓವರುಗಳಲ್ಲಿ 102 ರನ್‌ಗಳಿಗೆ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಅನ್ನಿಸಿಕೊಂಡಿದ್ದಾರೆ. ಭಾರತದ ನಾಯಕ ಅನಿಲ್ ಕುಂಬ್ಳೆ 35 ಓವರ್‌ಗಳಲ್ಲಿ 81 ರನ್ ನೀಡಿ 3 ವಿಕೆಟ್ ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ. ಜಾಹಿರ್ ಖಾನ್ 1 ವಿಕೆಟ್ ಪಡೆದಿದ್ದಾರೆ.

ತಮ್ಮ ಆಫ್‌ಬ್ರೆಕ್‌ನಿಂದ ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಗೋಳುಹೊಯ್ದುಕೊಂಡ ಹರಭಜನ್ ಅವರು ಅನಿಲ್‌ರಿಂದ ಉತ್ತಮ ಬೆಂಬಲ ಪಡೆದರು. ಲಂಕಾ ಪರ ನಾಯಕ ಜಯವರ್ಥನೆ ಸಂಯಮದಿಂದ ಆಟವಾಡಿ 86 ರನ್ ಗಳಿಸಿ ಅನಿಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಸಂಗಕ್ಕಾರ ಮತ್ತು ವರ್ಣಪುರ ಇವರಿಬ್ಬರು ಕೂಡ ಅರ್ಧಶತಕ ಗಳಿಸಿದ್ದಾರೆ.

ಕೋಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 239 ರನ್‌ಗಳಿಂದ ಸೋತಿದೆ. ಎರಡನೇ ಟೆಸ್ಟ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿರುವ ಭಾರತ ಈ ಟೆಸ್ಟ್ ಗೆಲ್ಲುವ ಉತ್ತಮ ಅವಕಾಶ ಪಡೆದಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+