ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗೂರಿನ ಭೂಮಿ ಮತ್ತೆ ರೈತರಿಗೆ ಧಕ್ಕದು: ಪ. ಬಂಗಾಳ

By Staff
|
Google Oneindia Kannada News

ಕೋಲ್ಕತ್ತಾ, ಆ.1: ಟಾಟಾ ಸಿಂಗೂರ್ ಭೂ ವಿವಾದಕ್ಕೆ ಮತ್ತೆ ಜೀವಬಂದಿದ್ದು, ಟಾಟಾ ಸಣ್ಣ ಕಾರು ಉತ್ಪಾದನೆಗಾಗಿ ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನು ಮತ್ತೆ ರೈತರಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರದ ಕೈಗಾರಿಕಾ ಸಚಿವ ನಿರುಪಮ್ ಸೇನ್ ಹೇಳಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಪಕ್ಷಗಳು ಹಾಗೂ ಬಂಡವಾಳಶಾಹಿಗಳು ಒಗ್ಗೂಡಬೇಕಿದೆ . ಇಲ್ಲದಿದ್ದರೆ ನ್ಯಾನೋ ಕಾರು ವರ್ಷದ ಅಂತ್ಯಕ್ಕೆ ರಸ್ತೆಗಿಳಿಯುವುದು ಕಷ್ಟವಾಗುತ್ತದೆ ಎಂದಿದ್ದಾರೆ.

ಟಾಟಾ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ರವಿ ಕಾಂತ್ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಾಗಿದೆ ಹೆಚ್ಚಿನ ಭದ್ರತೆವಹಿಸಿ,ಕಾರು ಉತ್ಪಾದನೆಗೆ ಸಂಪೂರ್ಣ ಸಹಕಾರ ನೀಡುವುದು ನಮ್ಮ ಸರ್ಕಾರದ ಗುರಿ. ಪಶ್ಚಿಮ ಬಂಗಾಳ ರಾಜ್ಯದ ಆರ್ಥಿಕ ಸುಧಾರಣೆಗೆ ಈ ಯೋಜನೆ ಕಾರ್ಯಗತವಾಗುವುದು ಅವಶ್ಯಕ ಎಂದು ಸಚಿವರು ಹೇಳಿದರು.

ಪ್ರತಿಭಟನೆ ಮುಂದುವರಿಕೆ
ತೃಣಮೂಲ ಕಾಂಗ್ರೆಸ್ ಬೆಂಬಲಿತ ಭೂಮಿ ಉಚ್ಚೇಡ್ ಪ್ರತಿರೋಧ್ ಸಮಿತಿ(Bhoomi Uched Pratirod Committee ) ಸರ್ಕಾರದ ವಿರುದ್ಧ ತನ್ನ ಪ್ರತಿಭಟನೆಯನ್ನು ಮುಂದುವರೆಸಿದೆ. ಟಾಟಾ ಕಂಪೆನಿ ನೀಡುವ ಪರಿಹಾರದ ಚೆಕ್ ಗಳನ್ನು ಸ್ವೀಕರಿಸಬಾರದು ಎಂದು ರೈತರಿಗೆ ತಾಖೀತು ಮಾಡಿದೆ. ವಶಪಡಿಸಿಕೊಂಡಿರುವ 400 ಕ್ಕೂ ಅಧಿಕ ಎಕರೆ ಭೂಮಿಯನ್ನು ರೈತರಿಗೆ ಹಿಂತಿರುಗಿಸದಿದ್ದರೆ ಭಾರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X