ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಮಹಾಜನ್,ಶ್ವೇತಾ ವಿವಾಹ ವಿಚ್ಛೇದನ

By Staff
|
Google Oneindia Kannada News

ಗುರ್‌ಗಾಂವ್, ಆ.‍1 : ಬಿಜೆಪಿ ನಾಯಕ ದಿ. ಪ್ರಮೋದ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಹಾಗೂ ಅವರ ಪತ್ನಿ ಶ್ವೇತಾ ಅವರ ವಿವಾಹ ವಿಚ್ಛೇದನ ಪ್ರಕರಣಕ್ಕೆ ಗುರ್‌ಗಾಂವ್ ಸೆಷನ್ ನ್ಯಾಯಲಯ ಅನುಮತಿ ನೀಡಿದೆ.

ಮದುವೆಯಾಗಿ ಕೆಲವೆ ದಿನಗಳಲ್ಲಿ ರಾಹುಲ್ ಮತ್ತು ಶ್ವೇತಾ ಅವರ ನಡುವೆ ಹೊಂದಾಣಿಕೆಯ ಕೊರತೆ ಉಂಟಾಗಿ ಕೌಟುಂಬಿಕ ಸಮಸ್ಯೆಗಳು ಎದುರಾಗಿದ್ದವು. ರಾಹುಲ್ ಮಹಾಜನ್ ತನ್ನನ್ನು ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ತಮಗೆ ತೀವ್ರ ಹಿಂಸೆ ನೀಡುತ್ತಾರೆ ಎಂದು ಮಾಧ್ಯಮವೊಂದಕ್ಕೆ ಶ್ವೇತಾ ಸಂದರ್ಶನದಲ್ಲಿ ತಿಳಿಸಿದ್ದರು. ರಾಹುಲ್ ಕೋಪದ ಭರದಲ್ಲಿ ಶ್ವೇತಾ ಅವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದನ್ನು ಪೋಟೋ ಸಹಿತ ಮಾಧ್ಯಮದ ಮುಂದೆ ಪ್ರದರ್ಶಿಸಿದ್ದರು.

ರಾಹುಲ್ ಮಾನಸಿಕ ಅಸ್ವಸ್ತತೆಯಿಂದ ಕೂಡಿರುವ ವ್ಯಕ್ತಿ ಎಂದು ಆರೋಪಿಸಿದ್ದ ಶ್ವೇತಾ ವಿಚ್ಛೇದನಕ್ಕಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ನ್ಯಾಯಲಯದ ಮೊರೆ ಹೋಗಿದ್ದರು. ವಿಚಾರಣೆ ನಂತರ ಇಬ್ಬರ ಒಪ್ಪಿಗೆಯನ್ನು ಪಡೆದು ಗುರ್‌ಗಾಂವ್ ನ್ಯಾಯಲಯ ವಿಚ್ಛೇದನ ಪಡೆಯಲು ಅನುಮತಿ ನೀಡಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X