ಖಗ್ರಾಸ ಸೂರ್ಯಗ್ರಹಣ; ನೇರ ವೀಕ್ಷಣೆ ಅಪಾಯ

ಬೆಂಗಳೂರು, ಆ.1: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ 4.42ರಿಂದ 6.07ರವರೆಗೆ ಸೂರ್ಯಗ್ರಹಣ ಭಾಗಶಃ ಗೋಚರವಾಗಲಿದೆ. ಅಪರೂಪದ ಈ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಬಹಳ ಅಪಾಯಕಾರಿ.

ಸಾರ್ವಜನಿಕರು ಗ್ರಹಣ ವೀಕ್ಷಿಸಲು ಅನುಕೂಲವಾಗುವಂತೆ ಜವಹರಲಾಲ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ತಾರಾಲಯಕ್ಕೆ ಭೇಟಿ ನೀಡಿ ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಬಹುದು. ಹಾಗೆಯೇ ಬೆಳಕಿನ ಪ್ರತಿಫಲನವನ್ನು ನೀರಿನಲ್ಲಿ ಅಥವಾ ಎಣ್ಣೆಯಲ್ಲಿ ನೋಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗೆ ನೋಡುವುದರಿಂದ ಶಾಶ್ವತ ಕುರುಡುತನಕ್ಕೆ ಕಾರಣವಾಗುತ್ತದೆ ಎಂಬುದು ತಜ್ಞರ ಹಿತೋಕ್ತಿ.

ನಾಸಾ ನೇರ ಪ್ರಸಾರ
ಭಾಗಶಃ ಸೂರ್ಯಗ್ರಹಣ ಅಮೆರಿಕದ ನಾಸಾ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ. ಆ ದೃಶ್ಯಗಳನ್ನು ಎಲ್ಲ ದೂರದರ್ಶನ ವಾಹಿನಿಗಳು ನೇರ ಪ್ರಸಾರ ಮಾಡುವುದರಿಂದ ಮನೆಯಲ್ಲೇ ಕೂತು ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಬಹುದು. ನಾಸಾದ ಅಂತರ್ಜಾಲ ತಾಣದಲ್ಲೂ ಗ್ರಹಣವನ್ನು ವೀಕ್ಷಿಸಬಹುದು.

(ದಟ್ಸ್‌ಕನ್ನಡ ವಾರ್ತೆ)

ರಾಹು-ಕೇತು ಕಾಟ ಮತ್ತು ಗ್ರಹಣ ಚಕ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+