ಸಾರ್ಕ್ ಶೃಂಗಸಭೆಗೆ ತೆರಳಿದ ಮನಮೋಹನ್ ಸಿಂಗ್

ನವದೆಹಲಿ, ಆ.01 : ಎರಡು ದಿನಗಳ ಕಾಲ ಕೊಲಂಬೋದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಮನನೋಹನ್ ಸಿಂಗ್ ಇಂದು ಶ್ರೀಲಂಕಾಕ್ಕೆ ತೆರಳಿದರು. ದಕ್ಷಿಣ ಏಷ್ಯಾ ರಾಷ್ಟ್ರಗಳ ಈ ಶೃಂಗಸಭೆಯಲ್ಲಿ ಕಾಬೂಲ್ ನಲ್ಲಿ ಭಾರತೀಯ ರಾಯಭಾರಿ ಕಚೇರಿ ಉಗ್ರರ ದಾಳಿ ಮತ್ತು ಭಾರತ ಬೆಂಗಳೂರು ಮತ್ತು ಅಹಮದಾಬಾದ್ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳ ಬಗ್ಗೆ ಸಭೆಯಲ್ಲಿ ಬಹುತೇಕ ಚರ್ಚೆಯಾಗುವ ಪ್ರಮುಖ ಅಂಶಗಳಾಗಿವೆ. ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಲುವಾಗಿ ಸದಸ್ಯ ರಾಷ್ಟ್ರಗಳ ಯಾವ ಕ್ರಮವನ್ನು ಅನುಸರಿಸಬೇಕು ಎನ್ನುವ ಕುರಿತು ಗಂಭೀರ ಆಲೋಚನೆ ನಡೆಯುವ ಸಾಧ್ಯತೆಗಳಿವೆ.

ಸಾರ್ಕ್ ಸದಸ್ಯ ರಾಷ್ಟ್ರಗಳಲ್ಲಿ ಉಗ್ರರ ಹಾವಳಿ ಮೀತಿಮೀರಿದೆ. ಬಹುಶಃ ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಆಯಾ ದೇಶಗಳು ಉಗ್ರರಿಂದ ಎದುರಿಸಿದ ಉಪಟಳವನ್ನು ಸಭೆಯ ಮುಂದಿಡುವ ಲಕ್ಷಣಗಳಿವೆ. ಸಭೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಯೂಸೆಫ್ ರಾಜಾ ಘಿಲಾನಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮೂರು ದಿನಗಳ ಕಾಲ ಅಲ್ಲಿ ತಂಗಲಿದ್ದು, ಪಾಕ್ ಪ್ರಧಾನಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಉಗ್ರರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳ ಬಗ್ಗೆ ವಿವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂಟು ರಾಷ್ಟ್ರಗಳ ಸಾರ್ಕ್ ಶೃಂಗ ಸಭೆಯಲ್ಲಿ ಭಾರತ, ಪಾಕಿಸ್ತಾನ, ಅಪಘಾನಿಸ್ತಾನ, ಬೂತಾನ್, ಶ್ರೀಲಂಕಾ, ಮಾಲ್ಡಿವ್ಸ್, ಬಾಂಗ್ಲಾದೇಶ, ನೇಪಾಳ ದೇಶದ ಪ್ರಧಾನಮಂತ್ರಿಹಾಗೂ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ. ಕಾಬೂಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಉಗ್ರರು ಧ್ವಂಸಗೊಳಿಸಿರುವ ಪ್ರಕರಣ ವಿಶೇಷವಾಗಿ ಚರ್ಚೆಗೆ ಬರಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ನವತೇಜ್ ವರ್ನಾ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+