ಆಗಸ್ಟ್ 1ರಿಂದ ವಿದ್ಯುತ್ ಕಡಿತಕ್ಕೆ ಕಡಿವಾಣ: ಈಶ್ವರಪ್ಪ

ಬೆಂಗಳೂರು, ಆ.1: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ವಿದ್ಯುತ್ ಸಮಸ್ಯೆ ಸುಧಾರಿಸಿದ್ದು ಆಗಸ್ಟ್ ತಿಂಗಳಿಂದ ವಿದ್ಯುತ್ ಕಡಿತ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ವಿದ್ಯುತ್ ಬೇಡಿಕೆ ಕಡಿಮೆಯಾಗಿದ್ದು ಲೋಡ್ ಶೆಡ್ಡಿಂಗ್ ಸಮಸ್ಯೆ ನಿವಾರಣೆಯಾಗಿದೆ. ಲೋಡ್ ಶೆಡ್ಡಿಂಗನ್ನು ಶೇ.20ರಿಂದ ಶೇ.15ಕ್ಕೆ ಕಡಿಮೆ ಮಾಡಲಾಗಿದೆ ಎಂದು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಬೇಡಿಕೆ ಮೇಲೆ ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ. ಆದರೆ ಜಿಂದಾಲ್, ಟಾಟಾ ಹಾಗೂ ಛತ್ತೀಸ್‌ಗಢದಿಂದ ಹೆಚ್ಚಿನ ವಿದ್ಯುತ್ ಪಡೆಯುವುದನ್ನು ಮುಂದುವರಿಸಲಾಗುತ್ತದೆ ಎಂದು ಅವರು ಹೇಳಿದರು.

ಬಳ್ಳಾರಿ ಶಾಖೋತ್ಪನ್ನ ಘಟಕ ಕಾರ್ಯಾರಂಭ ಮಾಡಿದ್ದು ಆ.1ರಿಂದ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ರಾಯಚೂರಿನ 7 ವಿದ್ಯುತ್ ಘಟಕಗಳನ್ನು ಸುಸ್ಥಿಯಲ್ಲಿಟ್ಟು 32 ದಶಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಪವನ ವಿದ್ಯುತ್‌ನಿಂದ 10 ದಶಲಕ್ಷ ಯುನಿಟ್, ಜಲವಿದ್ಯುತ್‌ನಿಂದ 35 ದಶಲಕ್ಷ ಯುನಿಟ್ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ. ಇದರಿಂದ ಪ್ರತಿ ದಿನದ ಬೇಡಿಕೆಯಾದ 105 ದಶಲಕ್ಷ ಯುನಿಟ್ ವಿದ್ಯುತ್ ಪೂರೈಸುವ ಸ್ಥಿತಿ ಈಗಿದೆ ಎಂದು ಈಶ್ವರಪ್ಪ ವಿವರಿಸಿದರು.

(ದಟ್ಸ್‌ಕನ್ನಡ ವಾರ್ತೆ)

ವರುಣನ ಅಬ್ಬರದಿಂದಲೋಡ್ ಶೆಡ್ಡಿಂಗ್ ಇಲ್ಲ
ಶುಕ್ರವಾರ(ಜು. 25)ದಿಂದ ಲೋಡ್ ಶೆಡ್ಡಿಂಗ್ ಆರಂಭ
ಬಿರುಸಾದ ಮುಂಗಾರು; ಚುರುಕಾದ ಬೇಸಾಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+