ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ದಾಳಿ ಪಾಕಿಸ್ತಾನದ ಪಿತೂರಿ : ಅಮೆರಿಕ

By Staff
|
Google Oneindia Kannada News

ವಾಷಿಂಗ್ ಟನ್, ಆ. 01 : ಕಳೆದ ತಿಂಗಳು ಕಾಬೂಲಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ಭಯೋತ್ಪಾದನೆಯ ಹಿಂದೆ ಪಾಕಿಸ್ತಾನ ಪ್ರಚೋದಿತ ಇಂಟರ್ ಸರ್ವೀಸ್ ಇಂಟೆಲಿಜನ್ಸ್ ಸಂಘಟನೆಯ ಕೈವಾಡವಿದೆ ಅಮೆರಿಕದ ಗೂಡಚಾರ ಸಂಸ್ಥೆ ತಿಳಿಸಿದೆ.

ಈ ಸಂಘಟನೆಯಿಂದ ವಿವಿಧ ಏಳು ಕಡೆಗಳಲ್ಲಿ ದಾಳಿ ನಡೆದಿದ್ದು, ಒಟ್ಟು 54 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಪ್ರಚೋದಿತ ಐಎಸ್ಐ ಸಂಸ್ಥೆ ಕೈವಾಡವಿರುವುದು ಸ್ಫಷ್ಟವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿರುವ ಅಮೆರಿಕ ಗೂಢಚಾರ ಸಂಸ್ಥೆಯ ಅಧಿಕಾರಿಗಳು, ಪಾಕಿಸ್ತಾನದ ಕೆಲ ಬುಡಕಟ್ಟು ಪ್ರದೇಶಗಳಲ್ಲಿ ಸಹ ಉಗ್ರರು ನೆಲೆಸಿರುವುದು ಸ್ಪಷ್ಟವಾಗಿದೆ. ಇದಕ್ಕೆ ಪಾಕಿಸ್ತಾನ ತೆಳೆದಿರುವ ಮೃದುಧೋರಣೆಯೇ ಬಲವಾದ ಕಾರಣ ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಖರ್ಜಾಯಿ ಅವರು ಭಾರತದೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವುದು ಕೂಡಾ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಅವರು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ಉಭಯ ದೇಶಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿರುವುದು ಪಾಕಿಸ್ತಾನಕ್ಕೆ ಸಹಿಸದಾಗಿದೆ. ಈ ಹಿನ್ನೆಲೆಯಲ್ಲಿ ಐಎಸ್ ಐ ಮೂಲಕ ದುಷ್ಕೃತ್ಯ ಎಸಗಲು ಸಹಾಯ ಮಾಡುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ ಖೈದಾ ಸಹಚರ ಅಫ್ಘಾನಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ನೆಲೆಸಿರುವ ಮೌಲ್ವಿ ಜಲಾಲುದ್ದೀನ್ ಹಖ್ಖೀನಿ ಈ ಕೃತ್ಯದ ಮುಖ್ಯ ರೂವಾರಿ ಎಂದು ಅಮೆರಿಕ ಅಪಾದಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X