ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಒಪ್ಪಂದ: ಐಎಇಎ ಮಹತ್ವದ ಸಭೆ ಜಾರಿ

By Staff
|
Google Oneindia Kannada News

ವಿಯನ್ನಾ, ಆ.1 : ಭಾರತ ಅಮೆರಿಕ ಪರಮಾಣು ನಾಗರಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಒಪ್ಪಂದ ಕುರಿತು ಚರ್ಚಿಸಲು ಇಂದು ನಡೆಯುವ 32 ಸದಸ್ಯ ರಾಷ್ಟ್ರಗಳ ಐಎಇಎ ಒಕ್ಕೂಟ ಚರ್ಚೆ ನಡೆಸಲಿದೆ. ಅಮೆರಿಕ ಒಪ್ಪಂದಕ್ಕೆ ಭಾರಿ ಉತ್ಸುಕವಾದ ಹಿನ್ನೆಲೆಯಲ್ಲಿ ಭಾರತ ಅಮೆರಿಕ ಅಣುಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯ.ತೆಗಳಿವೆ. ಭಾರತ ಅಣು ರಾಷ್ಟ್ರವಾಗುವುದಕ್ಕೆ ಪಾಕಿಸ್ತಾನವು ಅಸಮಾಧಾನ ವ್ಯಕ್ತಪಡಿಸಿದ್ದರೂ ಒಪ್ಪಂದಕ್ಕೆ ಯಾವುದೇ ಅಡ್ಡಿ ಯಾಗುವುದಿಲ್ಲ ಎನ್ನಲಾಗಿದೆ.

ಆದರೆ ಭಾರತ ಅಣು ರಾಷ್ಟ್ರವಾದರೆ ಮುಂದಿನ ದಿನಗಳಲ್ಲಿ ಪಕ್ಕದ ರಾಷ್ಟ್ರಗಳ ಮೇಲೆ ಸವಾರಿ ಮಾಡುವಂತ ಕೆಲಸಕ್ಕೆ ಕೈಹಾಕಬಹುದು. ಇಲ್ಲವೇ, ಅಣ್ವಸ್ತ್ರ ತಯಾರಿಸಬಹುದು ಎಂದು ಪಾಕ್ ಆತಂಕ ವ್ಯಕ್ತಪಡಿಸಿತ್ತು. ಈ ಕುರಿತು ಐಎಇಎ ಸಂಸ್ಥೆಗೂ ಕೂಡಾ ಪತ್ರವನ್ನು ಬರೆದಿತ್ತು. ಈ ಹಿನ್ನೆಲೆಯಲ್ಲಿ ಅಣು ಒಪ್ಪಂದಕ್ಕೆ ಹಿನ್ನೆಡೆಯುಂಟಾಗುವ ಸಾಧ್ಯತೆಗಳಿವೆ ಎಂದು ಉಹಿಸಿಲಾಗಿತ್ತು.

ಆದರೆ ಐಎಇಎ ಯಾವ ಆರೋಪಗಳಿಗೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರ ಜತೆಗೆ ಅಮೆರಿಕದ ಲಾಭಿ ಉತ್ತಮ ಕೆಲಸ ಮಾಡಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇಂದಿನ ಸಭೆಗೆ ಪಾಕಿಸ್ತಾನ ಗೈರು ಹಾಜರಿ ಆಗುವ ಸಾಧ್ಯತೆಗಳಿವೆ. ಈ ಮೂಲಕ ಭಾರತ ಮತ್ತು ಅಮೆರಿಕ ಅಣು ಒಪ್ಪಂದ ತನ್ನ ಸಂಪೂರ್ಣ ಸಹಮತವಿಲ್ಲ ಎನ್ನುವ ಸಂದೇಶ ರವಾನಿಸುವುದು ಅವರು ಉದ್ದೇಶವಾಗಿದೆ. ಸಭೆಯಲ್ಲಿ ಐಎಇಎ ನಿರ್ದೇಶಕ ಮೊಹ್ಮದ್ ಅಲ್ ಬರಾದಿ ಅವರ ಮುಂದೆ ಭಾರತ ಮತ್ತು ಅಮೆರಿಕ ದೇಶದ ರಾಯಭಾರಿಗಳು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಭಾರತ ಅಣು ರಾಷ್ಟ್ರವಾಗುವುದು ನಿಶ್ಚಿತ: ಪ್ರಣಬ್
ಸಾರ್ಕ್ ಸಮ್ಮೇಳನಕ್ಕೆ ಆಗಮಿಸಿದ ಪ್ರಣಬ್ ಮುಖರ್ಜಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X