ಗೌತಮಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ; 20 ಜನರ ಸಜೀವ ದಹನ
ವಾರಂಗಲ್ , ಆ.1: ಗರ್ಭಿಣಿ ಸೇರಿದಂತೆ, ಒಟ್ಟು 20 ಜನ ಸಜೀವ ದಹನಗೊಂಡ ದಾರುಣ ಘಟನೆ ಗೌತಮಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ. 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೋಗಿಯ ಬಾಗಿಲಿನ ಚಿಲಕ ಹಾಕಿದ್ದ ಪರಿಣಾಮ, ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿರುವ ಸಾಧ್ಯತೆಯಿದೆ. ಸಿಕಂದರಾಬಾದ್ ಕಾಕಿನಾಡ ಗೌತಮಿ ಎಕ್ಸ್ ಪ್ರೆಸ್ ನ ಎಸ್-9 ಬೋಗಿಗೆ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಉಂಟಾದ ಬೆಂಕಿ ತಗುಲಿ, ಕ್ರಮೇಣ 4ಕೋಚುಗಳಿಗೂ ಹಬ್ಬಿ ಅನಾಹುತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಇಪ್ಪತ್ತು ಮಂದಿ ಸಾವನ್ನಪ್ಪಿದ್ದು, ಐವತ್ತಕ್ಕೂ ಅಧಿಕ ಜನರಿಗೆ ಗಾಯಾಳಾಗಿವೆ. ಬೆಂಕಿ ತಗುಲಿದ ಬೋಗಿಯನ್ನು ಬೇರ್ಪಡಿಸಲಾಗಿದೆ. ಘಟನೆ ರಾತ್ರಿ ಸುಮಾರು1:30 ರ ವೇಳೆಗೆ ಸಂಭವಿಸಿರುವ ಸಾಧ್ಯತೆಯಿದೆ. ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ತಗುಲಿದ ಸಮಯದಲ್ಲಿ ವಾರಂಗಲ್ ಜಿಲ್ಲೆಯ ತಲ್ಲಪುಸಲಪಲ್ಲಿ ಹಾಗೂ ಮೆಹಬೂಬಬಾದ್ ನಡುವೆ ಸಂಚರಿಸುತ್ತಿತು ಎಂದು ವರದಿ ಬಂದಿದೆ ಎಂದು ದಕ್ಷಿಣ ಕೇಂದ್ರರೈಲ್ವೇ ವಕ್ತಾರ ಪಿ. ಕೃಷ್ಣಯ್ಯ ಹೇಳಿದ್ದಾರೆ.
ಮೃತ ಗರ್ಭಿಣಿ ಸೇರಿದಂತೆ ಮೂವರು ಅಂಗವಿಕಲರು ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ. ಸಿಕಂದರಾಬಾದ್, ಕಾಜಿಪೇಟ್ ಹಾಗೂ ವಿಜಯವಾಡದಿಂದ ತಕ್ಷಣ ರಕ್ಷಣಾ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಗಾಯಗೊಂಡವರನ್ನು ವಾರಂಗಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಗೆ ಹೈದರಾಬಾದಿನಿಂದ ವಿಶೇಷ ತಂಡ ಆಗಮಿಸಿದೆ. ಆದರೆ ಸಂಪೂರ್ಣ ಸುಟ್ಟು ಕರಕಲಾಗಿರುವ ದೇಹಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ಕೃಷ್ಣಯ್ಯ ಹೇಳಿದರು.
ಆಂಧ್ರಪ್ರದೇಶದಸಚಿವ ಜಿ. ಸೂರ್ಯ ರಾವ್ ಕೂಡ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಆದರೆ, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಹೈದರಾಬಾದ್- ವಿಜಯವಾಡ ವಿಭಾಗದ ಎಲ್ಲಾ ರೈಲುಗಳಿಗೆ ಬದಲಿ ಮಾರ್ಗಸೂಚಿಸಲಾಗಿದೆ ಎಂದು ದಕ್ಷಿಣ ಕೇಂದ್ರ ರೈಲ್ವೇ ಅಧಿಕಾರಿಗಳು ತಿಳಿಸಿದರು.
(ಏಜೇನ್ಸೀಸ್)


Click it and Unblock the Notifications
