ಸಿಪಿಐನ ವಯೋವೃದ್ಧ ಹರಿಕಿಶನ್ ಸಿಂಗ್ ನಿಧನ
ನೋಯಿಡಾ, ಆ.1: ಸಿಪಿಐ(ಎಂ)ನ ವಯೋವೃದ್ಧ ಹರಿಕಿಶನ್ ಸಿಂಗ್ ಸುರ್ಜೀತ್(92) ಶುಕ್ರವಾರ ಮಧ್ಯಾಹ್ನ 1.35ಕ್ಕೆ ನಿಧನರಾದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ನೋಯಿಡಾದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹಠಾತ್ ಮರಣಕ್ಕೆ ಹೃದಯಾಘಾತವೇ ಕಾರಣ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅನಾರೊಗ್ಯದ ಕಾರಣ ಜುಲೈ 7ರಂದು ಹರಿಕಿಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದ ಬಗ್ಗೆ ವೈದ್ಯರು ತೀವ್ರವಾಗಿ ನಿಗಾವಹಿಸಿದ್ದ್ದರು. ನೋಯಿಡಾದ ಇದೇ ಆಸ್ಪತ್ರೆಗೆ ಅವರು ಮೇ ತಿಂಗಳಲ್ಲೂ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಕೋಮಾ ಅವಸ್ಥೆಗೆ ಜಾರಿಕೊಂಡಿದ್ದರು.
1916 ಮಾರ್ಚ್ 23ರಂದು ಪಂಜಾಬ್ನ ಜಲಂಧರ ಜಿಲ್ಲೆಯಲ್ಲಿ ಜನಿಸಿದ ಸುರ್ಜಿತ್ ಸಿಂಗ್, 12 ವರ್ಷಗಳ ಕಾಲ ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಭಾರತದ ಕಮ್ಯುನಿಷ್ಟ್ ಪಕ್ಷದಲ್ಲಿ ಅವರದೇ ಆದಂತಹ ವಿಶೇಷ ವರ್ಚಸ್ಸಿತ್ತು. ಭಗತ್ ಸಿಂಗ್ ಅಭಿಮಾನಿಯಾಗಿದ್ದ ಇವರು ಸ್ವಾತಂತ್ರ್ಯ ಹೋರಾಟಕ್ಕೂ ಧುಮುಕಿದ್ದರು. 1936ರಲ್ಲಿ ಕಮ್ಯುನಿಷ್ಟ್ ಪಕ್ಷಕ್ಕೆ ಸೇರ್ಪಡೆಯಾಗಿ ನಂತರ 'ಕಿಸಾನ್ ಸಭಾ' ಹುಟ್ಟುಹಾಕಿದ್ದರು. ಹರಿಕಿಶನ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
(ಏಜೆನ್ಸೀಸ್)


Click it and Unblock the Notifications
