ಒಂಬತ್ತರ ಪೋರ ಈಗ ವಿಶ್ವ ಚೆಸ್ ಚಾಂಪಿಯನ್
ಬೆಂಗಳೂರು, ಆ.1 : ಬೆಂಗಳೂರಿನ ಟ್ರಯೋ ವರ್ಲ್ಡ್ ಶಾಲೆಯಲ್ಲಿ ಓದುತ್ತಿರುವ ಅರ್ಜುನ್ ರೋಷಿಕ್ ಭರತ್, ಅಂಡರ್ 9 ವಿಭಾಗದಲ್ಲಿ 4ನೇ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. 2200 ಅಥವಾ ಅದಕ್ಕಿಂತಲೂ ಹೆಚ್ಚು ಅಂಕ ಪಡೆದ ವಿಶ್ವ ಚೆಸ್ ಚಾಂಪಿಯನ್ನರಿಗೆ ಕೊಡುವ ಮಾಸ್ಟರ್ ಬಿರುದನ್ನು ಅರ್ಜುನ್ ಅವರಿಗೆ ನೀಡಲಾಗಿದೆ.
ಒಂಬತ್ತು ವರ್ಷದೊಳಗಿನ ಈ ಸ್ಪರ್ಧೆಯಲ್ಲಿ ಅರ್ಜುನ್, ಅನಿರುದ್ಧ ಭಟ್ ಮತ್ತು ಜೆರೋಮ್ಎಬೆನೆಜರ್ ಮೂವರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಭಾರತಕ್ಕೆ ಬಂದಿರುವ ಒಟ್ಟು 11 ಪದಕಗಳಲ್ಲಿ ನಾಲ್ಕು ಚಿನ್ನದ ಪದಕಗಳು. ಕರ್ನಾಟಕ ಅರ್ಜುನ್ ಪ್ರಥಮ ಸ್ಥಾನದಲ್ಲಿದ್ದಾರೆ, ಉಳಿದಂತೆ ಕರ್ನಾಟಕ ಪ್ರತಿಭೆಗಳಾದ ಪ್ರಣವ್ ರೆಡ್ಡಿ 8ನೇ ಸ್ಥಾನದಲ್ಲಿದ್ದರೆ, ಮಂಗಳೂರಿನ ನಿಹಾಲ್ ಮಂಜುನಾಥ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಕಳೆದ ತಿಂಗಳ ಜು.22 ರಿಂದ 30 ವರೆಗೆ ಸಿಂಗಾಪೂರ್ ನಲ್ಲಿ ನಡೆದ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕದ ಅರ್ಜುನ್ ಒಂಬತ್ತು ಸುತ್ತಿನಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಕರ್ನಾಟಕ ಪ್ರತಿಭೆಗಳ ತವರೂರು ಎಂಬುದು ಮತ್ತೊಮ್ಮೆ ಋಜುವಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಎಲೆಮರೆಯ ಕಾಯಿಗಳಂತಿರುವ ಪ್ರತಿಭಾವಂತರನ್ನು ಪೋಷಿಸಿ, ಬೆಳಸುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಭಾರತದ ಚೆಸ್ ಚಾಂಪಿಯನ್‌ಗಳಾದ ವಿಶ್ವನಾಥನ್ ಅನಂದ್ ಹಾಗೂ ಕೊನೇರು ಹಂಪಿಯ ಸಾಲಿಗೆ ಒಂಬತ್ತರ ಹರೆಯದ ರೋಷಿಕ್ ಸೇರಿರುವುದು ನಿಜಕ್ಕು ಹೆಮ್ಮೆ ಪಡುವ ವಿಚಾರ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
