ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ಸುವ್ಯವಸ್ಥೆಗೆ ನಿವೃತ್ತ ಸೈನಿಕರ ಬಳಕೆ

By Staff
|
Google Oneindia Kannada News

ಬೆಂಗಳೂರು, ಜು. 31 : ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಪೊಲೀಸರಿಗೆ ಅಗತ್ಯ ತರಬೇತಿ ನೀಡುವ ಸಲುವಾಗಿ ನಿವೃತ್ತ ಸೈನಿಕರನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಈ ಬಗ್ಗೆ ಸಂಪುಟ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ರಾಜ್ಯ ಉಗ್ರರ ಹಾವಳಿಯಿಂದ ಕಂಗಾಲಾಗಿದ್ದು, ಸಾರ್ವಜನಿಕರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಸೈನಿಕರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ಸೇವೆ ಲಭ್ಯವಿದ್ದ ಕಾರಣ ಈ ಬಗ್ಗೆ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ ಎಂದು ಹೇಳಿದರು.

ಪ್ರತಿಪಕ್ಷಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಎಂಟು ಬಾಂಬ್ ಗಳು ಸ್ಫೋಟಗಳೊಂಡಿದ್ದು, ರಾಜ್ಯ ಗುಪ್ತಚರ ಇಲಾಖೆಯ ಸಂಪೂರ್ಣ ವೈಪಲ್ಯ ಎಂದು ಟೀಕಿಸಿದ್ದರು. ವಿಧಾನಸಭೆಯಲ್ಲಿ ಪೊಲೀಸರ ವೈಪಲ್ಯ ಪ್ರತಿಧ್ವನಿಸಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಷಯವನ್ನು ಸ್ಪಷ್ಟಪಡಿಸಿದರು. ನಿವೃತ್ತ ಹಾಗೂ ಅನುಭವಿ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬಹುದು ಎಂದು ಅವರು ಸ್ಪಷ್ಟಿಕರಣ ನೀಡಿದರು. ಅಲ್ಲದೇ ಮೊನ್ನೆ ಬೆಂಗಳೂರಿನಲ್ಲಿ ನಡೆದ ಉಗ್ರರ ಸ್ಫೋಟ ಪ್ರಕರಣದ ಸಮಗ್ರ ವರದಿಯನ್ನು ಕೇಂದ್ರಕ್ಕೆ ನೀಡಲಾಗಿದೆ ಎಂದ ಅವರು, ಈ ಹಾವಳಿಯನ್ನು ತಪ್ಪಿಸಲು ಕೇಂದ್ರ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಸರ್ವಪಕ್ಷ ನಿಯೋಗ ದೆಹಲಿ ತೆರಳಿ ಪ್ರಧಾನಿ ಅವರನ್ನು ಒತ್ತಾಯಿಸುವುದಾಗಿ ಅವರು ಹೇಳಿದರು. ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದ ಸಂತಸ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ನಾಗರೀಕರ ಭದ್ರತೆಗಾಗಿ ಗುರುತಿನ ಚೀಟಿ, ಸಿಸಿಟಿವಿ
ಉಗ್ರರ ನಿಗ್ರಹಕ್ಕೆ ಶೀಘ್ರದಲ್ಲೇ ಹೊಸ ನೀತಿ:ಬಿಎಸ್ ವೈ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X