ಸೂರತ್: ಮತ್ತೆ ಮೂರು ಜೀವಂತ ಬಾಂಬ್ ಪತ್ತೆ

ಸೂರತ್, ಜು. 29 : ನಗರದ ಮೂರು ಕಡೆಗಳಲ್ಲಿ ಇಂದು ಬೆಳಗ್ಗೆ ಮತ್ತೆ ಮೂರು ಜೀವಂತ ಬಾಂಬ್ ಪತ್ತೆಯಾಗಿದೆ. ನಗರದ ವರಾಚಾ ಪ್ರದೇಶ, ಸಂತೋಷಿ ನಗರ ಮತ್ತು ಡೈಮಂಡ್ ನಗರದಲ್ಲಿ ಮೂರು ಜೀವಂತ ಬಾಂಬ್ ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ದೇಶದ ಬಟ್ಟೆ ವ್ಯಾಪಾರಿಗಳ ಪ್ರಮುಖ ಕೇಂದ್ರ ಎನ್ನಲಾದ ಸೂರತ್ ಉಗ್ರರ ಅಟ್ಟಹಾಸಕ್ಕೆ ಅಕ್ಷರಶಃ ನೆರಳತೊಡಗಿದೆ.

ಅಗತ್ಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಗರದ ಜನನಿಬಿಡ ಪ್ರದೇಶಗಳಾದ ವರಾಚಾ ಪ್ರದೇಶ ಹಾಗೂ ಸಂತೋಷಿ ನಗರದ ಲಭೇಶ್ವರ್ ಪೊಲೀಸ್ ಠಾಣೆಯ ಬಳಿ ಹೂತಿಟ್ಟಿದ್ದ ಜೀವಂತ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ರಾತ್ರಿಯೇ ಇನ್ನೊಂದು ಜೀವಂತ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಿ ಮುಂಬೈನ ಮಳಿಗೆಯೊಂದರಲ್ಲಿ ಅಹಮದಾಬಾದ್ ಸ್ಫೋಟ ಪ್ರಕರಣಕ್ಕೆ ಈ-ಮೇಲ್ ಕಳುಹಿಸಿದ್ದಾನೆ ಎನ್ನುವ ಆರೋಪದ ಮೇಲೆ ಅಮೆರಿಕ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ತಗೆದುಕೊಂಡಿದ್ದ ಪೊಲೀಸರು ತೀವ್ರ ವಿಚಾರಣೆ ನಂತರ ಆತ ನಿರಪರಾಧಿ ಎಂದು ತಿಳಿದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮುಂಬೈನ ಬಿಂದಿ ಬಜಾರ್ ನಲ್ಲಿದ್ದ ಮೂವರು ಕಾಶ್ಮೀರಿ ಮೂಲದ ವ್ಯಕ್ತಿಗಳನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರ್ ಟಿಓ ಅಧಿಕಾರಿಯನ್ನು ಕೂಡಾ ವಶಕ್ಕೆ ತಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಉಗ್ರರ ಮುಂದಿನ ಗುರಿ ಚೆನ್ನೈ, ಕೊಲ್ಕತ್ತಾ?
ಶಂಕಿತ ಉಗ್ರ ಅಬ್ದುಲ್ ಹಲೀಂ ಜತೆ ತೀವ್ರ ವಿಚಾರಣೆ
ಅಹಮದಾಬಾದ್‌ಗೆ ಪ್ರಧಾನಿ, ಸೋನಿಯಾ ಭೇಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+