ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್

ಟೆಹರಾನ್, ಜು. 29 : ಕೇಂದ್ರ ಸರ್ಕಾರ ವಿಶ್ವಾಸಮತದಲ್ಲಿ ಗೆಲುವು ಸಾಧಿಸುವ ಮೂಲಕ ಪರಮಾಣು ಒಪ್ಪಂದಕ್ಕೆ ಭಾರಿ ಬಲ ಬಂದಂತಾಗಿದ್ದು, ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಅಣು ಒಪ್ಪಂದ ಸದಸ್ಯ ರಾಷ್ಟ್ರಗಳ ಸಚಿವರ ಮಟ್ಟದ ಅನೌಪಚಾರಿಕ ಮಾತುಕತೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಗಸ್ಟ್ 1 ರಂದು ಸುರಕ್ಷತಾ ಒಪ್ಪಂದಕ್ಕ ಸಹಿ ಹಾಕುವ ನಿಟ್ಟಿನಲ್ಲಿ ಐಎಇಎ ಸದಸ್ಯರು ಸಭೆ ಸೇರುವ ಹಿನ್ನಲೆಯಲ್ಲಿ ಇಂದಿನ ಸಭೆ ಮಹತ್ವದ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಕಳೆದ ಅನೇಕ ವರ್ಷಗಳಿಂದ ಎಡಪಕ್ಷಗಳ ಬೆದರಿಕೆ ಹಿನ್ನಲೆಯಲ್ಲಿ ಒಪ್ಪಂದ ನೆನಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿ ಒಪ್ಪಂದ ಜಾರಿಗೊಳಿಸಲಾಗುತ್ತಿದೆ ಎಂದು ಸ್ಫಷ್ಟವಾಗಿ ಹೇಳಿದ ಹಿನ್ನಲೆಯಲ್ಲಿ ಎಡಪಕ್ಷಗಳು ಯುಪಿಎ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದವು. ನಂತರ ಜು.22 ರಂದು ಸಮಾಜವಾದಿ ಪಕ್ಷದ ಮೂಲಕ ಯುಪಿಎ ಸರ್ಕಾರ ವಿಶ್ವಾಸಮತದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಸಮಾಜವಾದಿ ಪಕ್ಷವೂ ಪರಮಾಣು ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದ್ದರಿಂದ ಒಪ್ಪಂದ ನಿರಾತಂಕವಾಗಿ ಮುಂದುವರೆದಿದೆ.

ಟೆಹರಾನ್ ನಲ್ಲಿ ನಡೆಯುತ್ತಿರುವ ಇಂದಿನ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿದೆ. ಸಭೆಯಲ್ಲಿ ಸಿಪ್ರಸ್, ಬೆಲಾರಸ್, ಅಲ್ಜೇರಿಯಾ ದೇಶದ ವಿದೇಶಾಂಗ ಸಚಿವರು ಭಾಗವಹಿಸುವರು. ಮುಂದಿನ ಅಗಸ್ಟ್ ಒಂದರಂದು ವಿಯನ್ನಾದಲ್ಲಿ ಐಎಇಎಯ 45 ನೇ ಸಭೆ ನಡೆಯಲಿದ್ದು, ಅಲ್ಲಿ ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಅಣು ಒಪ್ಪಂದ ಅಣ್ವಸ್ತ್ರ ತಯಾರಿಕೆಗೆ ಅಲ್ಲ: ಪ್ರಣಬ್
ಇಂಡೋ ಯುಎಸ್ ಅಣುಬಂಧಕ್ಕೆ ಪಾಕ್ ವಿರೋಧ
ಯುಎಸ್ ನಲ್ಲಿ ಪರಮಾಣು ಒಪ್ಪಂದಕ್ಕೆ ಭರ್ಜರಿ ಸಿದ್ಧತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+