ವರುಣನ ಅಬ್ಬರದಿಂದಲೋಡ್ ಶೆಡ್ಡಿಂಗ್ ಇಲ್ಲ
ಮಡಿಕೇರಿ, ಜು. 29 : ರಾಜ್ಯದ ವಿವಿಧಡೆ ಮುಂಗಾರು ಚುರುಕುಗೊಂಡಿದ್ದು, ಕೊಡಗಿನಲ್ಲಿ ವರುಣನ ಅಬ್ಬರಕ್ಕೆ ಒಂದೇ ದಿನದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿಯಾಗಿ ಭಾಗಮಂಡಲ ಪುಟ್ಟ ದ್ವೀಪದಂತಾಗಿದೆ. ಸೋಮವಾರದವರೆಗೆ ಸಂಪರ್ಕ ಕಳೆದುಕೊಂಡಿತ್ತು.
ಜಿಲ್ಲೆಯ ಗಡಿಭಾಗದ ಪೆರುಂಬಾಡಿ ಗೇಟ್ ಬಳಿಯ ವಾಟೆಕೊಲ್ಲಿ ಎಂಬಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಮೇಲೆ ಮರ ಉರುಳಿದ ಪರಿಣಾಮ ಬಸ್ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಕಣ್ಣೂರು ಡಿಫೋಗೆ ಸೇರಿದ ಬಸ್ ಚಾಲಕ ಪ್ರವೀಣ್(27) ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ಈ ಮಧ್ಯೆ ಮಳೆಯಿಂದ ವಿದ್ಯುತ್ ಬಳಕೆಯಲ್ಲಿ ಪ್ರತಿನಿತ್ಯ 30 ದಶಲಕ್ಷ ಯೂನಿಟ್ ಗಳಷ್ಟು ಕಡಿಮೆ ಆಗಿರುವುದು ಇಂಧನ ಇಲಾಖೆ ಅಧಿಕಾರಿಗಳು ಹರ್ಷವ್ಯಕ್ತಪಡಿಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಲಶಯಗಳ ಒಹರಿವು ಹೆಚ್ಚಾಗಿದೆ. ಉತ್ತರ ಕನ್ನಡ, ಶಿವಮೂಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳ ನೀರಿನ ಮಟ್ಟ ಏರುತ್ತಿದೆ.
ರಾಜ್ಯದ ಎಲ್ಲಡೆ 15 ರಿಂದ 20 ದಿನಗಳ ಕಾಲ ಇದೇ ರೀತಿ ಮಳೆ ಸುರಿದರೆ ಹತ್ತು ತಿಂಗಳ ಕಾಲ ವಿದ್ಯುತ್ ಉತ್ಪಾದನೆ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ ಎಂದು ಕೆಪಿಟಿಸಿಎಲ್ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳಿಂದ ರಾಜ್ಯದ ವಿದ್ಯುತ್ ಬಳಕೆಯ ಪ್ರಮಾಣದಲ್ಲಿ 30 ದಶಲಕ್ಷ ಯೂನಿಟ್ ಗಳಷ್ಟು ಕುಸಿದಿದೆ. ಇತ್ತೀಚೆಗೆ ದಿನವೊಂದಕ್ಕೆ 110-115 ದಶಲಕ್ಷ ಯೂನಿಟ್ ಬಳಕೆಯಾಗುತ್ತಿತ್ತು. ಈಗ ವಿದ್ಯುತ್ ಬಳಕೆಯ ಪ್ರಮಾಣ 75 ದಶಲಕ್ಷ ಯೂನಿಟ್ ಗೆ ಇಳಿದಿದೆ. ಬೆಂಗಳೂರು ನಗರದಲ್ಲಿ ಈಗ ಲೋಡ್ ಶೆಡ್ಡಿಂಗ್ ಜಾರಿಗೆ ಮಾಡುತ್ತಿಲ್ಲ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬಿರುಸಾದ ಮುಂಗಾರು; ಚುರುಕಾದ ಬೇಸಾಯ
ಇನ್ಫಿಯಿಂದ ವಿದ್ಯುತ್ ವಲಯಕ್ಕೆ ನೂತನ ತಂತ್ರಾಂಶ
ಇನ್ನೆರಡು ತಿಂಗಳು ಲೋಡ್ ಶೆಡ್ಡಿಂಗ್ ಜಾರಿ : ಈಶ್ವರಪ್ಪ
ಕರ್ನಾಟಕದಿ ಹರಿಯಲಿದೆ ಛತ್ತೀಸ್ ಗಢದ ವಿದ್ಯುತ್












Click it and Unblock the Notifications