ಇರಾಕ್‌ನಲ್ಲಿ ಮಾನವ ಬಾಂಬ್‌ಗೆ 57 ಮಂದಿ ಬಲಿ

ಬಾಗ್ದಾದ್, ಜು.29: ಇರಾಕ್‌ನಲ್ಲಿ ಮಾನವಬಾಂಬ್‌ಗಳು ಮಂಗಳವಾರ ಮಾರಣ ಹೋಮ ಸೃಷ್ಟಿಸಿವೆ. ರಾಜಧಾನಿ ಬಾಗ್ದಾದ್‌ನ ಕಿರ್ಕುಕ್ ಪಟ್ಟಣದಲ್ಲಿ ಉಗ್ರವಾದಿಗಳ ಬಾಂಬ್ ದಾಳಿಗೆ 57 ಜನ ಸ್ಥಳದಲ್ಲೇ ಮೃತಪಟ್ಟಿದ್ದು 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಬಾಗ್ದಾದ್‌ನಲ್ಲಿ 18 ಮಂದಿ ಷಿಯಾ ಮುಸ್ಲಿಂರು ಖದಿಮಿಯಾ ದರ್ಗಾಗೆ ಹೊರಡುತ್ತಿದ್ದಾಗ ಬಾಂಬ್ ಸ್ಫೋಟಿಸಿ ಸ್ಥಳದಲ್ಲೇ ಅಷ್ಟೂ ಜನ ಮೃತಪಟ್ಟಿದ್ದು 90 ಮಂದಿ ಗಾಯಗೊಂಡಿದ್ದಾರೆ. ಕಿರ್ಕುಕ್‌ನಲ್ಲಿ ಖುರ್ದರ ಪ್ರದರ್ಶನದ ವೇಳೆಯಲ್ಲಿ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ. ಈ ಎರಡೂ ಘಟನೆಗಳಲ್ಲಿ ಮಾನವ ಬಾಂಬ್‌ನ್ನು ಸ್ಫೋಟಿಸಲಾಗಿದ್ದು , ಬಾಂಬ್ ಸ್ಫೋಟಿಸಿದ ಇಬ್ಬರು ವ್ಯಕ್ತಿಗಳು ಮಹಿಳೆಯರೇ ಆಗಿರುವುದು ವಿಶೇಷ.

ಪ್ರತಿ ವರ್ಷ ಷಿಯಾ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ತೀರ್ಥಯಾತ್ರೆ ಬರುತ್ತಾರೆ. ಈ ರೀತಿ ದುರ್ಘಟನೆ ನಡೆಯದಂತೆ ಇರಾಕ್ ಸರ್ಕಾರ ಕಟ್ಟೆಚ್ಚರ ವಹಿಸಿತ್ತು. ಆದರೂ ಈ ಎಲ್ಲಾ ಬಿಗಿ ಭದ್ರತೆಯನ್ನು ಮೀರಿ ಉಗ್ರವಾದಿಗಳು ತಮ್ಮ ಕಾರ್ಯವನ್ನು ಪೂರ್ಣಗೊಳಿಸಿ ಯಶಸ್ವಿಯಾಗಿದ್ದಾರೆ.

(ಏಜೆನ್ಸೀಸ್)

ಸರಣಿ ಸ್ಫೋಟ ಘಟನೆಗೆ ವಿಶ್ವಸಂಸ್ಥೆ ತೀವ್ರ ಖಂಡನೆ
ಜಾರ್ಖಂಡ್ ನಲ್ಲಿಯೂ ಸ್ಫೋಟ 5 ಮಂದಿಗೆ ಗಾಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+