ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಶ್ವಾನದ್ದೇ ಮುಖ್ಯಪಾತ್ರ

By Staff
|
Google Oneindia Kannada News

Sniffer dog in actionಬೆಂಗಳೂರು, ಜು. 29 : ಕಳೆದ ಶುಕ್ರವಾರ ಸ್ಫೋಟಗೊಂಡ ಬಾಂಬ್ ಸದ್ದಿಗೆ ಬೆಂಗಳೂರಿನ ಜನ ಬೆಚ್ಚಿಬಿದ್ದಿತ್ತು. ಆ ಘಟನೆಯ ನಂತರ ಮತ್ತೆ ಎಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆಯೋ ಎನ್ನುವ ಆತಂಕ ಮನೆ ಮಾಡಿತ್ತು. ಭಯದ ವಾತಾವರಣದ ನಡುವೆ ಬೆಂಗಳೂರು ಎಂದಿನ ಸ್ಥಿತಿಗೆ ಬರತೊಡಗಿತ್ತು. ನಗರದ ಕೆಲ ಶಾಲೆಗಳಿಗೆ ಬಾಂಬ್ ಇಟ್ಟಿರುವ ಹುಸಿ ಬಾಂಬ್ ಬೆದರಿಕೆ ಕರೆಗಳಿಂದ ಸೋಮವಾರವೂ ಕ್ಷಣ ಕಾಲ ತಲ್ಲಣಕ್ಕೆ ಎಡೆಮಾಡಿಕೊಟ್ಟಿತು. ಈ ಮೂಲಕ ಪೊಲೀಸರು ಸೇರಿದಂತೆ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳಕ್ಕೆ ಸುಮ್ಮನೇ ಬೆವರು ಹರಿಯುವಂತೆ ಮಾಡಿತು.

ಈ ಸಂದರ್ಭದಲ್ಲಿ ಬಾಂಬ್ ನಿಷ್ಕಿಯದಳದ ಸಿಬ್ಬಂದಿಗಳು ಜೀವಂತ ಬಾಂಬ್ ನ್ನು ನಿಷ್ಕ್ರಿಯಗೊಳಿಸುವ ಪರಿ ಹೇಗೆ ಎನ್ನುವುದನ್ನು ವಿವರಿಸಿದರು. ಮೊನ್ನೆ ನಗರದ ಕೋರಮಂಗಲದ ಫೋರಂ ಮಾಲ್ ಬಳಿ ದೊರೆತ ಜೀವಂತ ಬಾಂಬ್ ಹಾಗೆ ನಿಷ್ಕ್ರಿಯಗೊಳಿಸಿದ ಉದಾಹರಣೆ ತೆಗೆದುಕೊಂಡು ವಿವರಿಸಿದರು. ದೇಶ ತುಂಬೆಲ್ಲಾ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿದ್ದು, ಅನೇಕ ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಮಾಹಿತಿ ಸಿಕ್ಕ ತಕ್ಷಣ ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಹಾಜರಾಗುತ್ತೇವೆ. ಮೊದಲು ನಾವು ಶ್ವಾನದಳಕ್ಕೆ ಕೆಲಸ ನೀಡುತ್ತೇವೆ. ಅದು ಬಾಂಬ್ ಇದೆ ಎನ್ನುವುದನ್ನು ಖಚಿತಪಡಿಸುತ್ತದೆ.

ಬಾಂಬ್ ನಿಷ್ಕ್ರಿಯಗೊಳಿಸಲು ನಮ್ಮ ಹತ್ತಿರ ಎಲ್ಲ ತರಹದ ಉಪಕರಣಗಳನ್ನು ತೆಗೆದುಕೊಂಡು ಹೋಗಿರುತ್ತೇವೆ. ಮೊಟ್ಟಮೊದಲು ಬಾಂಬ್ ಎಂತಹದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪುಟ್ಟ ಸ್ಕಾನರ್ ಮೆಷೀನ್ ಮೂಲಕ ಅದನ್ನು ಕಂಡು ಹಿಡಿಯುತ್ತೇವೆ. ನಂತರ ಬಾಂಬ್ ಸ್ಫೋಟಗೊಳ್ಳಬಾರದು ಎನ್ನುವ ಮುಂಜಾಗ್ರತೆಯಿಂದ ಬಾಂಬ್ ಇರುವ ವಸ್ತುಗಳ ಮೇಲೆ ವಿಶೇಷ ತರಹದ ಬಟ್ಟೆಯನ್ನು ಹೊದಿಸಲಾಗುತ್ತದೆ. ಈ ಎಲ್ಲ ಕಾರ್ಯಚರಣೆಯನ್ನು ಕ್ಷಣಮಾತ್ರದಲ್ಲಿ ಮಾಡಿ ಮುಗಿಸುತ್ತೇವೆ. ಆನಂತರ ಬಾಂಬ್ ಇಡಲಾಗಿರುವ ವಸ್ತುವಿನ ಮೇಲೆ ಹಿಡಿತ ಸಾಧಿಸಿ ಅದರಲ್ಲಿರುವ ಸ್ಫೋಟಕ ಸಾಮಗ್ರಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. ಕಳೆದ ಶನಿವಾರ ಫೋರಂ ಮಾಲ್ ಬಳಿ ದೊರೆತ ಜೀವಂತ ಬಾಂಬ್ ನ್ನು ನಿಷ್ಕ್ರಿಯ ದಳದ ಸುಕುಮಾರ್ ಎನ್ನುವವರು ನಿಷ್ಕ್ರಿಯಗೊಳಿಸವಲ್ಲಿ ಯಶಸ್ವಿಯಾಗಿದ್ದರು. ಅವರ ಸಾಹಸವನ್ನು ಮೆಚ್ಚಿ ರಾಜ್ಯ ಸರ್ಕಾರ 1 ಲಕ್ಷ ರುಪಾಯಿ ಬಹುಮಾನ ನೀಡಿ ಬೆನ್ನುತಟ್ಟಿದೆ.

ಗುಪ್ತಚರ ಇಲಾಖೆಯ ಇನ್ಸ್ ಪೆಕ್ಟರ್ ಎಂ.ಪಿ.ಸಾವರ್ ಗೋಳ ಅವರ ಪ್ರಕಾರ, ಬಾಂಬ್ ನಿಷ್ಕ್ರಿಯಗೊಳಿಸುವುದು ಸಾಹಸದ ಕೆಲಸವೇ ಸರಿ. ಜೀವವನ್ನು ಪಣಕ್ಕಿಟ್ಟು ಮಾಡಬೇಕಾದ ಕೆಲಸ ಇದಾಗಿದ್ದರಿಂದ ನಿಷ್ಕ್ರಿಯದಳದ ಸಿಬ್ಬಂದಿ ಸದಾ ಆತಂಕದಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೆಟಲ್ ಡಿಟೆಕ್ಟರ್ ಮೂಲಕ ಬಾಂಬ್ ಇರುವುದನ್ನು ಖಚಿತಪಡಿಸಿಕೊಂಡು ನಂತರ ಕಾರ್ಯಚರಣೆ ನಡೆಸಲಾಗುತ್ತಿದೆ. ಶ್ವಾನದಳವೂ ಬಾಂಬ್ ನಿಷ್ಕ್ರಿಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶ್ವಾನದಳಕ್ಕೆ ವಿಶೇಷ ತರಬೇತಿಯನ್ನು ನೀಡಲಾಗಿರುತ್ತದೆ ಎಂದು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ
ಬಾಂಬ್ ನಿಷ್ಕ್ರಿಯಗೊಳಿಸಿದ ಸುಕುಮಾರ್‌ಗೆ ಬಹುಮಾನ
ಸೂರತ್ : ಮತ್ತೆ ಮೂರು ಜೀವಂತ ಬಾಂಬ್ ಪತ್ತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X