ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿರುಸಾದ ಮುಂಗಾರು; ಚುರುಕಾದ ಬೇಸಾಯ

By Staff
|
Google Oneindia Kannada News

ಮಡಿಕೇರಿ/ಶಿವಮೊಗ್ಗ, ಜು.29: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ರುದ್ರ ನರ್ತನ ಮಾಡುತ್ತಿದ್ದು ಉತ್ತರ ಒಳನಾಡಿನಲ್ಲೂ ಸಹ ಉತ್ತಮ ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ಮಕ್ಕಿಗದ್ದೆ ನಾಟಿಗೆ ಇನ್ನಷ್ಟು ಮಳೆ ಬರಬೇಕಾಗಿದೆ. ಆದರೂ ಕೃಷಿ ಚಟುವಟಿಕೆಗಳು ಬಿರಿಸುಗೊಂಡಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

ಕಳೆದ 24ಗಂಟೆಗಳಲ್ಲಿ ತಲಕಾವೇರಿಯಲ್ಲಿ ಮತ್ತು ಭಾಗಮಂಡಲದಲ್ಲಿ 23 ಸೆಂ.ಮೀ ಮಳೆ ದಾಖಲಾಗಿದೆ. ಸೋಮವಾರ ಕೊಡಗಿನಲ್ಲಿ 129ಮಿ.ಮೀ ಮಳೆಯಾಗಿದೆ. ಹಾರಂಗಿ ಜಲಾಶಯದ ಒಳಹರಿವು 30,000 ಕ್ಯುಸೆಕ್ ಮತ್ತು ಹೊರ ಹರಿವು 15,000 ಕ್ಯುಸೆಕ್ ಇತ್ತು.

ಕುಂಭದ್ರೋಣ ಮಳೆ
ಪುತ್ತೂರು, ಹಾಸನದಲ್ಲಿ ತಲಾ 19 ಸೆಂ.ಮೀ; ಧರ್ಮಸ್ಥಳ, ಜಯಪುರದಲ್ಲಿ ತಲಾ 16 ಸೆಂ.ಮೀ; ಸುಬ್ರಹ್ಮಣ್ಯ, ಮಡಿಕೇರಿ, ಕುಶಾಲನಗರ ತಲಾ 15 ಸೆಂ.ಮೀ; ಗೇರುಸೊಪ್ಪ 21 ಸೆಂ.ಮೀ; ಮಾಧಾಪುರ, ಕಮ್ಮರಡಿ, ಮೂಡಿಗೆರೆ, ಕೊಟ್ಟ್ಟಿಗೆಹಾರ ತಲಾ 14 ಸೆಂ.ಮೀ; ಕೊಲ್ಲೂರು, ಜಗಳಬೆಟ್, ಶಿರಾಳಿ, ಕೊಪ್ಪ, ಸಕಲೇಶಪುರದಲ್ಲಿ ತಲಾ 14 ಸೆಂ.ಮೀ ಮಳೆಯಾಗಿದೆ.

ಭಟ್ಕಳ, ಸಿದ್ದಾಪುರ, ಅರಸಲು, ಬಾಳೇಹೊನ್ನೂರು ತಲಾ 12 ಸೆಂ.ಮೀ; ಬೆಳ್ತಂಗಡಿ, ಜೋಯ್ಡ, ಸಾಗರ, ಅರಕಲಗೂಡು ತಲಾ 10 ಸೆಂ.ಮೀ; ಹೊನ್ನಾವರ, ವಿರಾಜಪೇಟೆ ತಲಾ 9 ಸೆಂ.ಮೀ; ಅಂಕೋಲ, ಸೊರಬ, ಶಿವಮೊಗ್ಗದಲ್ಲಿ ತಲಾ 8 ಸೆಂ.ಮೀ; ಕುಮಟ, ಕದ್ರಾದಲ್ಲಿ ತಲಾ 7 ಸೆಂ.ಮೀ ಮಳೆ ದಾಖಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ವರುಣನ ಅಬ್ಬರದಿಂದ ಲೋಡ್ ಶೆಡ್ಡಿಂಗ್ ಇಲ್ಲ
ಇನ್ನೆರಡು ತಿಂಗಳು ಲೋಡ್ ಶೆಡ್ಡಿಂಗ್ ಜಾರಿ : ಈಶ್ವರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X