ಮಂಗಳೂರಿನಲ್ಲಿ ಅನಾಥ ಸೂಟ್‌ಕೇಸ್ ಸೃಷ್ಟಿಸಿದ ತಲ್ಲಣ

ಮಂಗಳೂರು, ಜು. 28 : ನಗರದ ನೆಹರು ಮೈದಾನದಲ್ಲಿ ಅನಾಥವಾಗಿ ಬಿದ್ದಿದ್ದ ಕಪ್ಪು ಸೂಟ್ ಕೇಸ್ ಕೆಲಕಾಲ ಸಾರ್ವಜನಿಕರಲ್ಲಿ ತಲ್ಲಣ ಉಂಟು ಮಾಡಿತು. ದೇಶದ ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಮೈದಾನದಲ್ಲಿ ಬಿದ್ದಿದ್ದ ಅನಾಥ ಸೂಟ್ ಕೇಸ್ ನಲ್ಲಿ ಬಾಂಬ್ ಇರಬಹುದೆಂಬ ಶಂಕೆ ಕಾಡ್ಗಿಚ್ಚಿನಂತೆ ಹಬ್ಬಿ ಜನರಲ್ಲಿ ಆತಂಕ ಮೂಡಿಸಿತ್ತು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೈದಾನದ ಸುತ್ತ ಭಾರಿ ಬಿಗಿ ಭದ್ರತೆ ನಿಯೋಜಿಸಿದರು.ಶ್ವಾನದಳದೊಂದಿಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಂದು ಸೂಟ್ ಕೇಸ್ ತಪಾಸಣೆ ನಡೆಸಿದರು. ಆದರೆ ತಪಾಸಣೆ ನಂತರ ಸೂಟ್ ಕೇಸ್ ನಲ್ಲಿ ಯಾವುದೇ ಸ್ಫೋಟಕ ಸಾಮಗ್ರಿಗಳು ಇಲ್ಲದಿರುವುದು ಖಚಿತವಾಯಿತು. ಅದರಲ್ಲಿ ಕೆಲ ದಾಖಲೆಗಳು ಮಾತ್ರ ಇದ್ದವು. ಕುತೂಹಲದಿಂದ ಮೈದಾನದ ಸುತ್ತಲೂ ಜನ ಜಂಗುಳಿ ನೆರೆದಿತ್ತು. ಇದು ಸೂಟ್‌ಕೇಸ್ ಬಾಂಬ್ ಅಲ್ಲ ಎಂದು ಖಚಿತವಾದ ನಂತರ ಜನತೆ ನಿಟ್ಟುಸಿರುಬಿಟ್ಟರು. ಸೂಟ್ ಕೇಸ್ ಸಿ.ವಿ.ಆಳ್ವಾ ಎಂಬವರಿಗೆ ಸೇರಿದ್ದು ಎಂದು ನಂತರ ತಿಳಿಯಿತು.

ಸುದ್ದಿ ತಿಳಿದ ಆಳ್ವಾ ಸ್ಥಳಕ್ಕೆ ಆಗಮಿಸಿದಾಗ ಮಣ್ಣಿನಲ್ಲಿ ಸೂಟಕೇಸನ್ನು ಚೀಲದಲ್ಲಿ ತುಂಬಿ ಪೊಲೀಸರು ಸುತ್ತುವರಿದಿದ್ದರು. ಮಂಗಳೂರಿನಲ್ಲಿ ತಮ್ಮ ಸೂಟ್‌ಕೇಸ್ ಇಷ್ಟೆಲ್ಲಾ ಅವಾಂತಾರ ಸೃಷ್ಟಿಸಿರುವುದನ್ನು ಕಂಡು ಬೆರಗಾದರು. ಸ್ಕಾರ್ಪಿಯೋ ಕಾರಿನಲ್ಲಿಟ್ಟಿದ್ದ ಸೂಟ್‌ಕೇಸ್ ತಾವು ಹಿಂದಿರುಗುವ ವೇಳೆಗೆ ಯಾರೋ ಕಿಡಿಗೇಡಿಗಳು ಕಳುವು ಮಾಡಿದ್ದರು. ಇದೇ ಸೂಟ್‌ಕೇಸನ್ನು ಕದ್ದೊಯ್ದ ಕಿಡಿಗೇಡಿಗಳು ಸೆಂಟ್ರಲ್ ಮಾರುಕಟ್ಟೆ ಬಳಿ ಅದನ್ನು ಬಿಸಾಡಿ ಹೋಗಿದ್ದರು. ಅಲ್ಲೂ ಸಹ ಜನರಲ್ಲಿ ಆತಂಕ ಮಡುಗಟ್ಟಿತ್ತು. ಕಿಡಿಗೇಡಿಗಳು ಸೂಟ್‌ಕೇಸನ್ನು ಕದ್ದೊಯ್ದು ಅದರಲ್ಲಿ ದಾಖಲೆ ಪತ್ರಗಳಿರುವ ಕಾರಣ ಅದನ್ನು ಅಲ್ಲೇ ಎಸೆದು ಹೋಗಿದ್ದರು. ಸೂಟ್ ಕೇಸ್ ವಾರಸುದಾರ ಆಳ್ವ ಎರಡು ದಿನಗಳ ಹಿಂದೆ ನನ್ನ ಸೂಟ್ ಕೇಸ್ ಕಳ್ಳತನವಾಗಿದೆ ಎಂದು ಪೊಲೀಸರಿಗೆ ವಿವರಿಸಿದ ನಂತರ ಪ್ರಕರಣ ಸುಖಾಂತ್ಯವಾಯಿತು.

(ದಟ್ಸ್ ಕನ್ನಡ ವಾರ್ತೆ)

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ
ಉಗ್ರರ ನಿಗ್ರಹಕ್ಕೆ ಶೀಘ್ರದಲ್ಲೇ ಹೊಸ ನೀತಿ: ಸಿಎಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+