ತಮಿಳುನಾಡಿನಲ್ಲಿ ಶಂಕಿತ ಉಗ್ರನ ಬಂಧನ
ತಮಿಳುನಾಡು, ಜು. 28 : ಆಗಸ್ಟ್ 15ರೊಳಗೆ ದೇಶದ ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟಿಸಲು ವ್ಯವಸ್ಥಿತ ಸಂಚು ರೂಪಿಸಿರುವ ಉಗ್ರರು ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಸರಣಿ ಸ್ಫೋಟ ಸೃಷ್ಟಿಸಿ ಯಶಸ್ವಿಯಾಗಿದ್ದಾರೆ. ಈಗ ಉಗ್ರವಾದಿಗಳ ದೃಷ್ಟಿ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಕಡೆ ಹರಿದಿದೆ. ತಮಿಳುನಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಅಬ್ದುಲ್ ಗಫಾರ್ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಮತ್ತು ಗುಜರಾತಿನಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ರೀತಿಯಲ್ಲೇ ತಮಿಳುನಾಡಿನಲ್ಲೂ ನಡೆಸಲು ಸಂಚು ರೂಪಿಸಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಂಧಿತ ಅಬ್ದುಲ್ ಗಫಾರ್ ನಿಂದ ಭಾರಿ ಪ್ರಮಾಣ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಚೆನ್ನೈ ಮತ್ತು ತಿರುನೇಲ್ವೇಲಿ ನಗರಗಳಲ್ಲಿ ಸ್ಫೋಟಗೊಳಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುನೇಲ್ವೇಲಿಯಲ್ಲಿರುವ ಅವರ ಸಂಬಂಧಿಕರ ಮನೆಯಿಂದ ಗಫಾರ್ನನ್ನು ಬಂಧಿಸಲಾಗಿದೆ. ಸ್ಫೋಟ ಮತ್ತು ಕೊಲೆ ಸೇರಿದಂತೆ ಎಂಟು ವಿವಿಧ ಪ್ರಕರಣಗಳ ಆಪಾದನೆಯ ಮೇಲೆ ಜೈಲಿನಲ್ಲಿರುವ ಅಲಿ ಅಬ್ಧುಲ್ ಈ ಸ್ಫೋಟದ ಮುಖ್ಯಸ್ಥವಾಗಿದ್ದು, ಜೈಲಿನಲ್ಲಿ ಇದ್ದುಕೊಂಡು ತನ್ನ ಕಾರ್ಯಚರಣೆಯನ್ನು ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ಮಧುರೈನ ಪ್ರಸಿದ್ಧ ಮಿನಾಕ್ಷಿ ಅಮ್ಮನ್ ದೇವಾಲಯಕ್ಕೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಉಗ್ರರ ಹಿಟ್ ಲಿಸ್ಟ್ ಲ್ಲಿ ಈ ದೇವಾಲಯವೂ ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಸರಣಿ ಸ್ಫೋಟ :ರಾಷ್ಟ್ರದಾದ್ಯಂತ ಭಾರಿ ಕಣ್ಗಾವಲು
'ನಮ್ಮ ಮುಂದಿನ ಗುರಿ ಕೇರಳ', ಮುಜಾಹಿದ್ದೀನ್ ಕರೆ
ಉಗ್ರರು ಇ-ಮೇಲ್ ರವಾನಿಸಿದ್ದ ಕೇಂದ್ರ ಪತ್ತೆ


Click it and Unblock the Notifications
