ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರೊಳಗೆ ಕಾರಿಡಾರ್ ರಸ್ತೆ ಪೂರ್ಣ: ಖೇಣಿ

By Staff
|
Google Oneindia Kannada News

ಮೈಸೂರು, ಜು. 28 : ಎರಡು ಮಹಾನ್ ನಗರಗಳ ಜೋಡಿಸುವ ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆ ಡಿಸೆಂಬರ್ 2009ರೊಳಗೆ ಎಲ್ಲ ಕಾಮಗಾರಿ ಮುಗಿದು ಲೋಕಾರ್ಪಣೆಯಾಗಲಿದೆ ಎಂದು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಹೇಳಿದರು.

ನಗರದಲ್ಲಿ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರೆಂಟು ಸಮಸ್ಯೆಗಳನ್ನು ಎದುರಿಸಿದ ಕಾರಿಡಾರ್ ರಸ್ತೆ ಕೊನೆಯ ಹಂತಕ್ಕೆ ತಲುಪಿದೆ ಎಂದರು. ಕಳೆದ ಸರ್ಕಾರದಿಂದ ಕಾರಿಡಾರ್ ರಸ್ತೆಗೆ ಅನೇಕ ಅಡ್ಡಿ ಆತಂಕಗಳು ಎಡತಾಕಿದವು. ಆದ್ದರಿಂದ ನಾನು ತುಂಬಾ ಸಮಸ್ಯೆಯನ್ನು ಎದುರಿಸಿದೆ. ಆದರೆ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಇರುವ ಬೆಂಗಳೂರು ಹಾಗೂ ಐತಿಹಾಸಿಕ ತಾಣವಾಗಿರುವ ಮೈಸೂರಿಗೆ ಈ ರಸ್ತೆಯನ್ನು ನೀಡಬೇಕು. ಈ ಮೂಲಕ ಅನೇಕ ಜನರಿಗೆ ಅನುಕೂಲವಾಗಲಿದೆ ಎನ್ನುವ ನನ್ನ ಹಂಬಲ ಈಡೇರುವ ದಿನಗಳ ಹತ್ತಿರದಲ್ಲಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಈ ರಸ್ತೆಯಲ್ಲಿ ಸಮಯ ಉಳಿಸುವುದರ ಜೊತೆಗೆ ಉತ್ತಮ ಸೇವೆಯನ್ನು ಒದಗಿಸಲಿದೆ. ಯಡಿಯೂರಪ್ಪ ಅವರ ಸರ್ಕಾರ ಕಾಮಗಾರಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ಕಾಮಗಾರಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದರು. ಅದರಂತೆ ಕಾಮಗಾರಿಯ ಎಲ್ಲ ವಿವರವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಖೇಣಿ ಹೇಳಿದರು. ಬೆಂಗಳೂರು ಮೈಸೂರು ರಸ್ತೆಯಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಿಂದ ಇಂಥ ರಸ್ತೆಗಳನ್ನು ಮಾಡಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X