ಸರಣಿ ಸ್ಫೋಟ :ರಾಷ್ಟ್ರದಾದ್ಯಂತ ಭಾರಿ ಕಣ್ಗಾವಲು
ನವದೆಹಲಿ, ಜು. 28 : ಭಯೋತ್ಪಾದಕರ ದಾಳಿಯ ಹಿನ್ನಲೆಯಲ್ಲಿ ರಾಷ್ಟ್ರದಾದ್ಯಂತ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಭಾನುವಾರ ಕೆಲ ಮಾಧ್ಯಮಗಳ ಮೂಲಕ ಕೇರಳದಲ್ಲಿ ಬಾಂಬ್ ಸ್ಫೋಟಗೊಳಿಸುತ್ತೇವೆ ಎಂದು ಉಗ್ರರು ಬೆದರಿಕೆ ಒಡ್ಡಿದ ಹಿನ್ನಲೆಯಲ್ಲಿ ವಿಶೇಷ ಕೇಂದ್ರ ಪಡೆಯನ್ನು ಅಲ್ಲಿಗೆ ರವಾನಿಸಲಾಗಿದೆ. ತಿರುವನಂತಪುರಂನಲ್ಲಿ ಖಾಕಿ ತಂಡಬೀಡುಬಿಟ್ಟಿದೆ. ಜನರು ಭಯಭೀತರಾಗಿರುವ ವರದಿಯಾಗಿದೆ.
ಕೇರಳ ಪೊಲೀಸ್ ಮಹಾನಿರ್ದೇಶಕ ಕೃಷ್ಣಮೂರ್ತಿ ಅವರು ಭದ್ರತೆಗೆ ಬೇಕಿರುವ ಎಲ್ಲ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ಪ್ರತಿ ಗಂಟೆಗೊಮ್ಮೆ ವಿವರವನ್ನು ಪಡೆಯುತ್ತಿದ್ದಾರೆ. ಜತೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಪಾತಿಸ್ತಾನದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಿನ್ನೆ ಬೆಂಗಳೂರು, ಇಂದು ಗುಜರಾತ್ ನಾಳೆ ಕೇರಳದಲ್ಲಿ ಸ್ಫೋಟಗೊಳಿಸುತ್ತೇವೆ ಎಂದು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಬೆದರಿಕೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ದೇಶದ ಧಾರ್ಮಿಕ ಕೇಂದ್ರಗಳು, ವಿಮಾನ ನಿಲ್ದಾಣಗಳು, ಪ್ರಮುಖ ಬಸ್ ನಿಲ್ದಾಣಗಳು, ರೇಲ್ವೆ ನಿಲ್ದಾಣಗಳು, ಬೃಹತ್ ಮಾರಾಟ ಮಳಿಗೆಗಳು, ಸಾಫ್ಟವೇರ್ ಕಂಪನಿಗಳಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುವ ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
