ಅಣು ಒಪ್ಪಂದ ಅಣ್ವಸ್ತ್ರ ತಯಾರಿಕೆಗೆ ಅಲ್ಲ: ಪ್ರಣಬ್
ಕೋಲ್ಕತ್ತಾ, ಜು. 28 : ಅಮೆರಿಕದೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಳ್ಳಲು ಮುಂದಾಗಿರುವ ಅಣು ಒಪ್ಪಂದ ಬರೀ ಅಣ್ವಸ್ತ್ರ ತಯಾರಿಕೆ ಮಾತ್ರ ಎಂದು ತಿಳಿದರೆ ಅದು ತಪ್ಪು. ಈ ಒಪ್ಪಂದದಿಂದ ಭಾರತ ಅಭಿವೃದ್ಧಿ ಹೊಂದುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಶಕ್ತಿಯುತವಾದ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದರು.
ಭಾನುವಾರ ನಗರದಲ್ಲಿ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದದಿಂದ ಮುಖ್ಯವಾಗಿ ವಿದ್ಯುತ್ ತಯಾರಿಕೆ ಮತ್ತು ತೈಲ ಬೆಲೆಯನ್ನು ಹತೋಟಿಯಲ್ಲಿಡಲು ಇದರಿಂದ ಸಾಧ್ಯವಾಗಲಿದೆ ಎಂದರು.
ಅಮೆರಿಕದೊಂದಿಗೆ ಮಾಡಿಕೊಂಡಿರುವ ಅಣು ಒಪ್ಪಂದದ ಮೂಲಕ ಭಾರತ ಬರೀ ಅಣ್ವಸ್ತ್ರ ತಯಾರಿಕೆ ಮಾಡುತ್ತದೆ. ಅದೇ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನುವ ತಪ್ಪು ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲಾಗಿದೆ. ಇದು ಶುದ್ಧ ತಪ್ಪು ಮತ್ತು ಸುಳ್ಳು ಎಂದ ಅವರು, ಒಪ್ಪಂದದ ಮೂಲಕ ಭಾರತ ಮುಂದಿನ ದಿನಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಇಂದಿನ ಯುವಕರಿಗೆ ಮುಂದಿನ ದಿನಗಳಲ್ಲಿ ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)
ಅಣುಬಂಧದಿಂದ ಭಾರತ ಬಲಾಢ್ಯ ರಾಷ್ಟ್ರವಾಗಲಿದೆ
ವಿಶ್ವಾಸ ಮತ : ಯುಪಿಎಗೆ ನಿಚ್ಚಳ ಗೆಲುವು


Click it and Unblock the Notifications
