ಭಾರತದ ಸಾಫ್ಟ್ವೇರ್ ರಫ್ತು ಶೇ.28ರಷ್ಟು ಏರಿಕೆ
ನವದೆಹಲಿ, ಜು.28: ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಕಾರ 2007-08ರಲ್ಲಿ ಭಾರತದ ಸಾಫ್ಟ್ವೇರ್ ಕ್ಷೇತ್ರದ ರಫ್ತು ಪ್ರಮಾಣ ಶೇ. 28ರಷ್ಟು ಏರಿಕೆಯಾಗಿದೆ.
ವರ್ಷಾಂತ್ಯಕ್ಕೆ ಸಾಫ್ಟ್ವೇರ್ ಮತ್ತು ಸಾಫ್ಟ್ವೇರ್ ಆಧಾರಿತ ಸೇವೆಗಳ ರಫ್ತು ವೃದ್ಧಿಸುತ್ತಿದ್ದು, 40.3 ಶತಕೋಟಿ ಡಾಲರ್ ಮುಟ್ಟಲಿದೆ ಎಂದು ಇಲಾಖೆ ಅಂದಾಜಿಸಿದೆ. ಕಳೆದ ಸಾಲಿನಲ್ಲಿ 1,41,000 ಕೋಟಿ ರು. ಮೊತ್ತದ ಸಾಫ್ಟ್ವೇರ್ ರಫ್ತಾಗಿತ್ತು. ಹಾಗೆಯೇ ವಿದ್ಯುನ್ಮಾನ ಹಾಗೂ ಐಟಿ ಕ್ಷೇತ್ರದ ರಫ್ತು 1,75,700 ಕೋಟಿ ರು.ಗಳಿಗೆ ಏರಿಕೆಯಾಗಲಿದೆ.
ದೇಶೀಯ ಮಾರುಕಟ್ಟೆಯೂ ಸೇರಿದಂತೆ ಸಮಗ್ರವಾಗಿ ಐಟಿ-ಬಿಪಿಒ ಉದ್ಯಮ 2007-08ನೇ ಆರ್ಥಿಕ ವರ್ಷದಲ್ಲಿ ಶೇ.28ರಷ್ಟು ಏರಿಕೆಯಾಗಿ 52 ಶತಕೋಟಿ ಡಾಲರ್ಗೆ ತಲುಪಿದೆ. ಭಾರತದ ನಾಲ್ಕು ಮುಂಚೂಣಿ ಸಾಫ್ಟ್ವೇರ್ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ, ಇನ್ಫೋಸಿಸ್, ವಿಪ್ರೊ ಮತ್ತು ಸತ್ಯಂ ಉತ್ತಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ಈ ವರ್ಷ ಮತ್ತಷ್ಟು ವೃದ್ಧಿ ಸಾಧಿಸುವ ಗುರಿಯನ್ನು ಹೊಂದಿವೆ.
(ಏಜೆನ್ಸೀಸ್)
ಮೊದಲ ತ್ರೈಮಾಸಿಕದಲ್ಲಿ ವಿಪ್ರೋಗೆ ಶೇ.25ರಷ್ಟು ಲಾಭ
ಮೊದಲ ತ್ರೈಮಾಸಿಕದಲ್ಲಿ ಇನ್ಫಿ ಗೆ ಶೇ.21 ಲಾಭ


Click it and Unblock the Notifications
