• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರವಾದ ಹೊಸ ಮುಖ ಇಂಡಿಯನ್ ಮುಜಾಹಿದ್ದೀನ್

By Staff
|

ಬೆಂಗಳೂರು, ಜು.28: ಹಿಜಬುಲ್ ಮುಜಾಹಿದ್ದೀನ್, ಸಿಮಿ, ಐಎಸ್‌ಐ, ಹೂಜಿ, ಲಷ್ಕರ್ ಇ ತೊಯ್ಬಾ ಮುಂತಾದ ಉಗ್ರವಾಗಿ ಸಂಘಟೆನೆಗಳ ಹೆಸರು ಕೇಳಿದ್ದೀವಿ, ಆದರೆ ಇತ್ತೀಚೆಗಷ್ಟೇ ಕೇಳಿ ಬರುತ್ತ್ತಿರುವ ಮತ್ತೊಂದು ಉಗ್ರವಾದಿ ಸಂಘಟನೆಯ ಹೆಸರು ಇಂಡಿಯನ್ ಮುಜಾಹಿದ್ದೀನ್. 2007ರಲ್ಲಿ ಉತ್ತ್ತರ ಪ್ರದೇಶದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ ಮಾಧ್ಯಮಗಳಿಗೆ ಇ-ಮೇಲ್ ಕಳುಹಿಸಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆಯ ಬೀಜ ಬಿತ್ತಿತು.

ನಂತರ 63 ಮಂದಿಯನ್ನು ಬಲಿತೆಗೆದುಕೊಂಡ ಜೈಪುರದಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಇ-ಮೇಲ್ ಕಳುಹಿಸಿ ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿರುವುದಾಗಿ ಘೋಷಿಸಿತ್ತು. ಇಂತಹದ್ದೇ ಸೈಕಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಆ ಸೈಕಲ್‌ನ ಸಂಖ್ಯೆಯನ್ನು ಇ-ಮೇಲ್‌ನಲ್ಲಿ ನಮೂದಿಸಿತ್ತು. ಆದರೆ ಬಾಂಬ್ ನಿಷ್ಕ್ರಿಯಗೊಳಿಸುವುದಕ್ಕೂ ಮುನ್ನ ಅನಾಹುತ ಸಂಭವಿಸಿತ್ತು.

ಇ-ಮೇಲ್‌ನಲ್ಲಿ ''ಗುರು ಅಲ್ ಹಿಂದಿ'' ಎಂದು ಸಹಿ ಸಹ ಹಾಕಲಾಗಿತ್ತು. ಅಂತಾರಾಷ್ಟ್ರೀಯವಾಗಿ ಅಮೆರಿಕಾವನ್ನು ಭಾರತ ಎಲ್ಲಿಯವರೆಗೂ ಸಮರ್ಥಿಸುತ್ತಿದೆ ಅಲ್ಲಿಯವರೆಗೂ ನಮ್ಮ ಯುದ್ಧ ಮುಂದುವರೆಯುತ್ತದೆ. ನಾವು ಭಾರತದ ಪ್ರವಾಸಿ ತಾಣಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತೇವೆ ಎಂದು ಬೆದರಿಕೆ ಹಾಕಿತ್ತು.

ಈ ಭಯೋತ್ಪಾದಕ ಸಂಘಟನೆಗೆ ವಿದೇಶಿ ಸಂಘಟನೆಗಳ ಸಹಕಾರವಿದ್ದು, ಇವರ ಕಾರ್ಯಚಟುವಟಿಕೆಗಳ ಬಗ್ಗೆ ನಮಗೂ ಅರಿವಿದ್ದು ಶೀಘ್ರದಲ್ಲೇ ತಕ್ಕ ಉತ್ತರ ಕೊಡುವುದಾಗಿ ಪೊಲೀಸರು ಉತ್ತರನ ಪೌರುಷ ಮೆರೆಯುತ್ತಾರೆ. ಬಾಂಗ್ಲಾ ಮೂಲದ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಉಗ್ರವಾದಿ ಸಂಘಟನೆಯೊಂದಿಗೆ ಇವರಿಗೆ ಸಂಬಂಧಗಳಿರುವ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಸಂಘಟನೆಯ ಜಾಡು ಮಾತ್ರ ಸಿಗುತ್ತಿಲ್ಲ.

ಅಹಮದಾಬಾದ್ ಬಾಂಬ್ ಸ್ಫೋಟಕ್ಕೂ ಮುನ್ನ ಇವರು ಇ-ಮೇಲ್ ಸಂದೇಶ ಕಳುಹಿಸಿದ್ದರು. ಅಲ್ಲಾ ಹೆಸರಿನಲ್ಲಿ ಈ ಸಂದೇಶ ಕಳುಹಿಸುತ್ತಿರುವುದಾಗಿ "feel the terror of death" ಎಂದು ಸಂದೇಶ ರವಾನಿಸಿತ್ತು. 2002ರ ಗುಜರಾತ್ ಗಲಭೆಯಲ್ಲಿ 2,500 ಕ್ಕೂ ಹೆಚ್ಚು ಜನರನ್ನು ಹಿಂದೂಗಳು ಹತ್ಯೆ ಮಾಡಿದರು. ಅವರಲ್ಲಿ ಬಹುತೇಕ ಮಂತಿ ಮುಸ್ಲಿಂರು. ಇದಕ್ಕೆ ಪ್ರತೀಕಾರವಾಗಿ ಅಹಮದಾಬಾದನ್ನು ಸ್ಫೋಟಿಸುತ್ತಿರುವುದಾಗಿ ಅವರು ತಿಳಿಸಿ ಹಾಗೇ ಮಾಡಿದರು.

ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ಇ-ಮೇಲ್‌ಗಳಲ್ಲಿ ಕಳುಹಿಸಿ ಅದರಲ್ಲಿ ಮುಸ್ಲಿಮರಿಗೆ ಕೊಡ್ಡುತ್ತಿರುವ ಮಾನಸಿಕ ಹಿಂಸೆ, ಜೈಲಿಗೆ ತಳ್ಳುವುದನ್ನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಮುಸ್ಲಿಂ ಧರ್ಮಾರ್ಥ ಸಂಸ್ಥೆಗೆ ಸೇರಿದ ಸ್ಥಳವನ್ನು ಖರೀದಿಸಿ ಅಲ್ಲಿ ಮನೆ ಕಟ್ಟುತ್ತಿರುವ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಗೂ ಇ-ಮೇಲ್ ಎಚ್ಚರಿಕೆ ರವಾನೆಯಾಗಿದೆ. ಅಲ್ಲಿ ಮನೆ ಕಟ್ಟದಿರುವಂತೆ ಬೆದರಿಕೆ ಒಡ್ಡಿದೆ. ಹೀಗೆ ಇ-ಮೇಲ್‌ಗಳ ಮೂಲಕ ಬೆದರಿಕೆ ಒಡ್ಡುತ್ತಾ, ಸ್ಫೋಟಗಳಿಗೂ ಕಾರಣವಾಗುತ್ತಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಬೇರು ಮಟ್ಟ ಕಿತ್ತೆಸೆಯಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಈ ಸಂಘಟನೆ ಇನ್ನಷ್ಟು ಅವಾಂತರಗಳನ್ನು ಸೃಷ್ಟಿಸಲಿದೆ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more