ಭಾರತದ ಪ್ರವಾಸಕ್ಕೆ ಆಸ್ಟ್ರೇಲಿಯನ್ನರ ಹಿಂದೇಟು

ಮೆಲ್ಬೋರ್ನ್, ಜು. 28 : ಮುಂದಿನ ತಿಂಗಳ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಮತ್ತು ಒಂದು ದಿನದ ಸರಣಿಗೆ ಆಸ್ಟ್ರೇಲಿಯಾ ಹಿಂದೇಟು ಹಾಕತೊಡಗಿದೆ. ಆಗಸ್ಟ್ ತಿಂಗಳ 10 ರ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪ್ರವಾಸದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಟ್ರೇಲಿಯಾ ಮಂಡಳಿ ಹೇಳಿದೆ.

ಕಳೆದ ವಾರ ಭಾರತದ ಬೆಂಗಳೂರು ಮತ್ತು ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದ್ದವು. ಈ ಪರಿಸ್ಥಿತಿಯಲ್ಲಿ ಭಾರತದ ಪ್ರವಾಸ ಮಾಡುವುದು ಅಪಾಯಕಾರಿ. ದೇಶದ ತುಂಬೆಲ್ಲಾ ಸ್ಫೋಟದ ವಾತಾವರಣ ಉಂಟಾಗಿದೆ. ನಮ್ಮ ಆಟಗಾರರ ಭದ್ರತೆಯ ದೃಷ್ಟಿಯಿಂದ ಪ್ರವಾಸ ಕಾರ್ಯಕ್ರಮದ ಬಗ್ಗೆ ಮುಂದಿನ ತಿಂಗಳ ನಿರ್ಧರಿಸಲಾಗುವುದು ಎಂದು ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ಅಗಸ್ಟ್ ತಿಂಗಳ 10 ನಂತರ ಭದ್ರತಾ ಅಧಿಕಾರಿಯ ಸಲಹೆ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಪ್ರವಾಸ ರದ್ದು ಪಡಿಸುವುದೇ ಉತ್ತಮ ಎನಿಸುತ್ತದೆ ಎಂದು ಮಂಡಳಿಯ ಸದಸ್ಯ ಪೀಟರ್ ಯಂಗ್ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ಮೊದಲ ಟೆಸ್ಚ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಬೇಕಿದೆ.

(ದಟ್ಸ್ ಕನ್ನಡ ವಾರ್ತೆ)

ಸರಣಿ ಸ್ಫೋಟ :ರಾಷ್ಟ್ರದಾದ್ಯಂತ ಭಾರಿ ಕಣ್ಗಾವಲು
ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?
ಗಳೂರಿಗರಿಗೆ ಇಂದು ಕರಾಳ ಶುಕ್ರವಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+