ಜನರಿಂದಲೇ ಬಿಬಿಎಂಪಿ ಮೇಯರ್ ಆಯ್ಕೆ

ಬೆಂಗಳೂರು, ಜು. 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಹುದ್ದೆಗೆ ಜನರಿಂದಲೇ ನೇರ ಆಯ್ಕೆ ಮಾಡಲು ಬಿಜೆಪಿ ಒಲವು ತೋರಿದೆ. ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಅದನ್ನು ಜಾರಿಗೊಳಿಸಲು ಬದ್ಧವಾಗಿರುವ ಬಿಜೆಪಿ ಈ ಕುರಿತು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.

ಚೆನ್ನೈ ಮೇಯರ್ ಸ್ಥಾನಕ್ಕೆ ನೇರ ಚುನಾವಣೆ ನಡೆಯುತ್ತದೆ. ಜನರಿಂದ ಆಯ್ಕೆಯಾದ ಮೇಯರ್ ಅವಧಿ 5 ವರ್ಷವಾಗಿದೆ. ಈಗ ಮೇಯರ್ ಅಧಿಕಾರ ಅವಧಿ 11 ತಿಂಗಳ ಮಾತ್ರವಾಗಿದೆ. ಬಿಜೆಪಿ ಕೈಗೊಂಡಿರುವ ನಿರ್ಧಾರಕ್ಕೆ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗಿದೆ. ಮೇಯರ್ ಸ್ಥಾನದ ಅಧಿಕಾರ ಅವಧಿ ಕನಿಷ್ಠ 5 ವರ್ಷವಿದ್ದರೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. 11 ತಿಂಗಳ ಮೇಯರ್ ಅವಧಿ ಅವೈಜ್ಞಾನಿಕವಾಗಿದೆ ಎನ್ನುವ ಅಭಿಪ್ರಾಯಗಳು ಎಲ್ಲೆಡೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಮೇಯರ್ ಅವಧಿಯನ್ನು ಹೆಚ್ಚಿಸಲು ನಿರ್ಧರಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+