ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ

By Staff
|
Google Oneindia Kannada News

Carmel convent, jayanagar 4 th blockಬೆಂಗಳೂರು, ಜು. 28 : ಬೆಂಗಳೂರಿನ ಪ್ರಮುಖ ಶಾಲೆಗಳಾದ ಜಯನಗರದ ಮೌಂಟ್ ಕಾರ್ಮೆಲ್, ಸೇಂಟ್ ಆಂಥೋನಿಯಾ ಮತ್ತು ಲಿಟಲ್ ರೋಸರ್ಸ್ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಯಿಂದ ಕೆಲ ಕಾಲ ಶಾಲೆಯ ಸುತ್ತ ಮುತ್ತ ಭಯದ ವಾತಾವರಣ ಉಂಟಾಯಿತು.

ವಿಷಯ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಆಗಮಿಸಿದರು. ಶಾಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದರು. ಶಾಲೆಯ ಸುತ್ತಮುತ್ತಲೂ ಕೂಡಾ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಬಾಂಬ್ ಇಟ್ಟಿರುವ ಸುಳಿವು ಸಿಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯ ಹುಟ್ಟುಸುವ ಸಲುವಾಗಿ ಕೆಲ ಕಿಡಿಗೇಡಿಗಳು ಮಾಡಿರುವ ಕೆಲಸ ಇದು ಎಂದು ಅವರು ಹೇಳಿದ್ದಾರೆ. ಕರೆ ಮಾಡಿರುವ ನಂಬರ್ ಎಲ್ಲಿಂದ ಬಂದಿದೆ ಹಾಗೂ ಫೋನ್ ನಂಬರ್ ನ್ನು ಪಡೆದುಕೊಂಡಿರುವ ಅವರು, ಹುಸಿ ಬಾಂಬ್ ಬೆದರಿಕೆ ಹಾಕಿದ ಕಿಡಿಗೇಡಿಗಳ ಪತ್ತೆಯಲ್ಲಿ ನಿರತರಾಗಿದ್ದಾರೆ.

ಶಾಲಾ ಆಡಳಿತ ಮಂಡಳಿ ತರಗತಿಗೆ ರಜೆ ಘೋಷಿಸಿದೆ. ಘಟನೆಯಿಂದ ಭಯಭೀತರಾದ ಮಕ್ಕಳ ಪೋಷಕರು ಶಾಲೆಯತ್ತ ದೌಡಾಯಿಸಿದರು. ಹುಸಿ ಬಾಂಬ್ ಕರೆ ಎಂದು ತಿಳಿಯುತ್ತಿದ್ದಂತೆಯೇ ನಿಟ್ಟುಸಿರುಬಿಟ್ಟರು. ನಗರದಲ್ಲಿ ಶುಕ್ರವಾರ ನಡೆದ ಸ್ಫೋಟದ ಸ್ಥಳಗಳ ಸಮೀಪ ಈ ಶಾಲೆಗಳು ಇರುವುದರಿಂದ ಕೆಲ ಕಾಲ ಸಾರ್ವಜನಿರಲ್ಲಿ ಆತಂಕ ಮನೆ ಮಾಡಿತ್ತು. ಇನ್ನೊಂದು ಅನಾಹುತ ಸಂಭವಿಸಿತು ಎಂದೆಣಿಸಲಾಗಿತ್ತು. ಪೊಲೀಸರು ಎಲ್ಲ ಸಮಸ್ಯೆಯನ್ನು ನಿರಾತಂಕವಾಗಿ ಮುಗಿಸಿದರು.

(ದಟ್ಸ್ ಕನ್ನಡ ವಾರ್ತೆ)

ನಟ ವಿಷ್ಣು ಮನೆಗೆ ಹುಸಿ ಬಾಂಬ್ ಬೆದರಿಕೆ!
ಉಗ್ರರ ನಿಗ್ರಹಕ್ಕೆ ಕೋಕಾ ಕಾಯ್ದೆ ಅಗತ್ಯ: ಬಿಎಸ್‌ವೈ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X