ಅಮರನಾಥ್ ದೇಗುಲ ವಿವಾದ ಮತ್ತೆ ನಿಷೇಧಾಜ್ಞೆ
ಜಮ್ಮು, ಜು. 28 : ಅಮರನಾಥ್ ದೇವಾಲಯಕ್ಕೆ ನೀಡಿದ್ದ ಭೂಮಿಯನ್ನು ಹಿಂಪಡೆದುಕೊಂಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಭಾನುವಾರ ಅಮರನಾಥ್ ಯಾತ್ರಾ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾರಾಮಾರಿ ಆಗಿರುವ ಹಿನ್ನಲೆಯಲ್ಲಿ ನಗರದಲ್ಲಿ ಮತ್ತೆ ನಿಷೇದಾಜ್ಞೆ ಜಾರಿಲಾಗಿದೆ.
ಜಮ್ಮು ಸರ್ಕಾರ ಅಮರ ನಾಥ್ ದೇವಾಲಯಕ್ಕೆ ನೀಡಿದ್ದ ಭೂಮಿಯನ್ನು ಹಿಂತೆಗೆದುಕೊಂಡಿರುವ ಕ್ರಮವನ್ನು ವಿರೋಧಿಸಿ ಹಿಂದುಗಳು ನಡೆಸುತ್ತಿರುವ ಪ್ರತಿಭಟನೆ ಸಧ್ಯಕ್ಕೆ ತೆರೆಬೀಳುವ ಸಾಧ್ಯತೆಗಳಿಲ್ಲ. ವಿರೋಧ ಪಕ್ಷ ಮತ್ತು ಕೆಲ ಮುಸ್ಲಿಂ ನಾಯಕರು ಒತ್ತಾಯದ ಮೇಲೆ ದೇವಾಲಯಕ್ಕೆ ನೀಡಿದ್ದ 100 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭೂಮಿಯನ್ನು ವಾಪಸ್ಸು ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ಹಿಂದುಗಳು ಪ್ರತಿಭಟನೆ ಆರಂಭಿಸಿದ್ದಾರೆ. ಭಾನುವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಸಮಿತಿಗೆ ಸೇರಿದ ಕೆಲವರನ್ನು ಬಂಧಿಸಲಾಗಿದೆ.
ದೇವಾಲಯಕ್ಕೆ ಭೂಮಿ ನೀಡಿದ್ದ ಪ್ರಕರಣ ಕಾಂಗ್ರೆಸ್ ಸರ್ಕಾರವನ್ನೇ ಉರುಳಿಸಿತು. ಕಳೆದ ಕೆಲ ವರ್ಷಗಳಿಂದ ಜಮ್ಮುನಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿತ್ತು. ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಿಡಿಪಿ ಪಕ್ಷದ ನಾಯಕಿ ಮೆಹಬೂಬ ಮುಪ್ತಿ ಬೆಂಬಲ ವಾಪಸ್ಸು ಪಡೆದ ಹಿನ್ನಲೆಯಲ್ಲಿ ಸರ್ಕಾರ ವಿಶ್ವಾಸಮತವನ್ನು ಎದುರಿಸಿತ್ತು. ಆಗ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಗುಲಾಮ್ ನಬಿ ಅಜಾದ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳನಿಂದ ದೇವಾಲಯ ಸಮಿತಿಯಿಂದ ಪ್ರತಿಭಟನೆ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರ ಪತನ
ಭಾರತ್ ಬಂದ್ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ


Click it and Unblock the Notifications
